Wednesday, June 29, 2022

Latest Posts

ಕಾಶಿ ವಿಶ್ವನಾಥ ಧಾಮ ಲೋಕಾರ್ಪಣೆ ನೇರ ಪ್ರಸಾರ: ಮೋದಿಜೀ ದೇಶದ ಶಕ್ತಿ: ಸೋಮಶೇಖರ್ ರೆಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ‌ನೇತೃತ್ವದಲ್ಲಿ, ವಿಶ್ವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವಾರಣಾಸಿಯಲ್ಲಿ ಸೋಮವಾರ ನಡೆದ ಕಾಶಿ ವಿಶ್ವನಾಥ ಧಾಮ ಲೋಕಾರ್ಪಣೆ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ನಗರದ ಕಲ್ಯಾಣ ಸ್ವಾಮೀ ಅವರ ಶ್ರೀಮಠದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ವಿಶ್ವಕ್ಕೆ ಭಾರತದ ಶ್ರೇಷ್ಠತೆ ಹಾಗೂ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಮರುಸ್ಥಾಪಿಸುವ ಕನಸು ಕಂಡಿದ್ದ, ವಿಶ್ವ ನಾಯಕ, ಪ್ರಧಾನ ಮಂತ್ರಿ ನರೇಂದ್ರ ‌ಮೋದಿಜೀ ಅವರು, ದಿವ್ಯ ಕಾಶಿ-ಭವ್ಯ ಕಾಶಿಯ ಕನ್ನಸನ್ನು ನನಸು ಮಾಡಿದ್ದಾರೆ. ಮೋದಿಜೀ ಅವರ ಕ್ಷೇತ್ರ ವಾರಣಾಸಿಯಲ್ಲಿ ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲ ಹಾಗೂ ಗಂಗಾನದಿಯ ಮಣಿಕರ್ಣಿಕಾ ಮತ್ತು ಲಲಿತಾ ಘಾಟ್ ಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ. ವಾರಣಾಸಿ ಕ್ಷೇತ್ರವನ್ನು ಗತವೈಭವ ಮರುಕಳಿಸುವ ರೀತಿಯಲ್ಲಿ ಸುಮಾರು 900 ಕೋಟಿ ರೂ.ಯೋಜನೆ ರೂಪಿಸಿ ಜಾರಿಗೆ ತರಲಾಗಿದೆ. ಇದಕ್ಕೆ ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಡಿಸಿಎಂಗಳು ಸೇರಿದಂತೆ ಇತರೇ ಗಣ್ಯರು, ಸ್ವಾಮೀಜಿಗಳು ಸಾಕ್ಷಿಯಾಗಿದ್ದಾರೆ ಎಂದರು.
ಇತಿಹಾಸ ಪ್ರಸಿದ್ಧ ವಾರಣಾಸಿಯನ್ನು ಧಾರ್ಮಿಕ ಪ್ರವಾಸೋದ್ಯಮದ ಧ್ಯೋತಕವಾಗಿ ಮಾರ್ಪಡಿಸುವುದು ಪ್ರದಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಮುಖ್ಯ ಉದ್ದೇಶವಾಗಿದೆ. ಕಾರಿಡಾರ್ ನಿಂದ ಅದಕ್ಕೆ ಇನ್ನಷ್ಟು ಉತ್ತೇಜನ ಸಿಗಲಿದೆ, ಮೋದಿ ಜೀ ಅವರು, ವ್ಯಕ್ತಿಯಲ್ಲ, ಅವರೊಬ್ಬ ದೇಶದ ಶಕ್ತಿಯಾಗಿದ್ದಾರೆ ಎಂದರು.
ಕಲ್ಯಾಣ ಮಠದ ಈ ಸಂದರ್ಭದಲ್ಲಿ ಕಲ್ಯಾಣ ಸ್ವಾಮೀಜಿ, ಎಮ್ಮೆಲ್ಸಿ ಚುನಾವಣೆಯ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ‌ಮೋತ್ಕರ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ, ಪಾಲಿಕೆ ಸದಸ್ಯ, ಅಶೋಕ್, ಎಸ್.ಮಲ್ಲನಗೌಡ, ವೇಮಣ್ಣ ಸೇರಿದಂತೆ ವಿವಿಧ ಗಣ್ಯರು, ಸ್ವಾಮೀಜಿಗಳು, ಮುಖಂಡರು ಉಪಸ್ಥಿತರಿದ್ದರು. ಸುಮಾರು ಜನರು ಎಲ್ ಇಡಿ ಪರದೆಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss