spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೌನ್​ ಬನೇಗಾ ಕರೋಡ್​ಪತಿ: 25 ಲಕ್ಷ ರೂ. ಗೆದ್ದ ನೀರಜ್​ ಚೋಪ್ರಾ – ಶ್ರೀಜೇಶ್​​ ಜೋಡಿ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮಿತಾಬ್​ ಬಚ್ಚನ್​​​​ ನಡೆಸಿಕೊಡುವ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾವಲಿನ್​ ಥ್ರೋ ಆಟಗಾರ ನೀರಜ್​ ಚೋಪ್ರಾ ಹಾಗೂ ಹಾಕಿ ಗೋಲ್ ಕೀಪರ್​​ ಪಿ ಆರ್ ಶ್ರೀಜೇಶ್​​ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಕಾರ್ಯಕ್ರಮದಲ್ಲಿ ಇವರು ಆಗಮಿಸುತ್ತಿದ್ದಂತೆ ಅಮಿತಾಬ್​ ಬಚ್ಚನ್​​​​ ಅದ್ದೂರಿ ಸ್ವಾಗತಿಸಿದರು. ಆಟದ ಮದ್ಯೆ ಹಲವು ಆಕರ್ಷಕ ಸನ್ನಿವೇಶಗಳು ನೋಡುಗರನ್ನು ಮನಸೆಳೆಯಿತು.
ಕಾರ್ಯಕ್ರಮದ ಮೂಲಕ ತಮ್ಮ ಆರಂಭದ ಜೀವನದ ಬಗ್ಗೆ ಕೆಲ ಕುತೂಹಲಕಾರಿ ಹಾಗೂ ಕಷ್ಟದ ದಿನಗಳ ಬಗ್ಗೆ ಇಬ್ಬರು ಪ್ಲೇಯರ್ಸ್​ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ನೀರಜ್​ ಚೋಪ್ರಾ ಹಾಗೂ ಶ್ರೀಜೇಶ್​​ 13 ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುವ ಮೂಲಕ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿದ್ದ ನೀರಜ್​ ಚೋಪ್ರಾ ಜಾವೆಲಿನ್​ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದು, ಭಾರತೀಯ ಪುರುಷರ ಹಾಕಿ ತಂಡದ ಗೋಲ್ ಕೀಪರ್​ ಶ್ರೀಜೇಶ್​​ ಕಂಚಿನ ಪದಕ ಗೆದ್ದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss