Wednesday, August 17, 2022

Latest Posts

‘ಅಂತಾರಾಷ್ಟ್ರೀಯ ಧೈರ್ಯವಂತ ಮಹಿಳೆ ಪ್ರಶಸ್ತಿ’ಗೆ ತಮಿಳುನಾಡಿನ ಕೌಸಲ್ಯಾ ಶಂಕರ್ ನಾಮನಿರ್ದೇಶನ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಯುಎಸ್‌ ಕಾನ್ಸುಲೇಟ್ ವತಿಯಿಂದ ನೀಡಲಾಗುವ ‘ಅಂತಾರಾಷ್ಟ್ರೀಯ ಧೈರ್ಯವಂತ ಮಹಿಳೆ ಪ್ರಶಸ್ತಿ’ಗೆ ತಮಿಳುನಾಡು ಮೂಲದ ಜಾತಿ ವಿರೋಧಿ ಆಂದೋಲನ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಕೌಸಲ್ಯಾ ಶಂಕರ್ ಅವರು ನಾಮ ನಿರ್ದೇಶನಗೊಂಡಿದ್ದಾರೆ.
ಮಾರ್ಚ್ 11ರಂದು ಆಯೋಜಿಸಲಾದ ‘ಧೈರ್ಯಶಾಲಿ ಮಹಿಳೆಯರು ಉತ್ತಮ ಜಗತ್ತಿನ ರೂವಾರಿಗಳು’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಚೆನ್ನೈನಲ್ಲಿನ ಯುಎಸ್ ಕಾನ್ಸುಲ್ ಜನರಲ್ ಜುಡಿತ್ ರಾವಿನ್ ಅವರು ಕೌಸಲ್ಯಾ ಶಂಕರ್ ಅವರನ್ನು ಸನ್ಮಾನಿಸಿದರು.
ತಮಿಳುನಾಡಿನ ಕೌಸಲ್ಯಾ ಅವರು ಯು.ಎಸ್. ಮಿಷನ್ ಇಂಡಿಯಾ 2021ರ ಯು.ಎಸ್. ಸೆಕ್ರೆಟರಿ ಆಫ್ ಸ್ಟೇಟ್ ಇಂಟರ್ ನ್ಯಾಷನಲ್ ವುಮನ್ ಆಫ್ ಕರೇಜ್ (ಐಡಬ್ಲ್ಯುಒಸಿ) -‘ಅಂತಾರಾಷ್ಟ್ರೀಯ ಧೈರ್ಯವಂತ ಮಹಿಳೆ’ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಮತ್ತೊಬ್ಬರ ಜೀವನದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಅಸಾಧಾರಣ ಧೈರ್ಯ, ಛಲ ಹಾಗೂ ನಾಯಕತ್ವ ಪ್ರದರ್ಶಿಸುವ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!