Friday, July 1, 2022

Latest Posts

KBC ಯಲ್ಲಿ ಅನಾವರಣಗೊಳ್ಳಲಿದೆ ರಿಯಲ್ ಹೀರೋ ಸೋನು ಸೂದ್ ಅವರ ಪುಸ್ತಕ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿಗೆ ಇಡೀ ದೇಶವೇ ತತ್ತರಿಸಿ ಹೋಗಿದ್ದ ವೇಳೆ ಸಾಮಾನ್ಯ ವರ್ಗದ ಜನರಿಗೆ ಹಲವು ರೀತಿಯಲ್ಲಿ ಸೆಲೆಬ್ರೆಟಿಗಳು ಹಾಗೂ ರಾಜಕೀಯ ನಾಯಕರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಇದೇ ರೀತಿ ತನ್ನಿಂದ ಆಗುವ ಎಲ್ಲಾ ರೀತಿಯ ಸಹಾಯವನ್ನು ನೀಡಿ ಬಡ ಜನರ ಬಾಳಿಗೆ ಬೆಳಕು ಆದವರು ಸಿನಿಮಾ ನಟ ಸೋನು ಸೂದ್.
ಜನಸಾಮಾನ್ಯರ ನಿಜವಾದ ಹೀರೋ ಸೋನು ಸೂದ್ ಇತ್ತೀಚೆಗೆ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್ ಬನೇಗಾ ಕ್ರೋರ್​ಪತಿಯ ಸೆಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಬರೆದಿದ್ದ ‘ ಐಯಾಮ್ ನೋ ಮೆಸ್ಸಾಯ’ ಪುಸ್ತಕವನ್ನು ಅಮಿತಾಬ್ ಬಚ್ಚನ್ ಅವರಿಗೆ ಉಡುಗೊರೆಯಾಗಿ ನೀಡಿದರು.
ಈ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸೋನು ಸೂದ್​, ಹೊಸ ವರ್ಷ ಚೆನ್ನಾಗಿ ಪ್ರಾರಂಭವಾಗಿದೆ. ನಾನು ದೇಶದ ಜನ ಹೆಚ್ಚು ಇಷ್ಟಪಟ್ಟ ವ್ಯಕ್ತಿಯೊಂದಿಗೆ ಇಲ್ಲಿದ್ದೇನೆ. ಇಂದಿನ ಕೆಬಿಸಿ ಕಾರ್ಯಕ್ರಮದಲ್ಲಿ ನನ್ನ ಪುಸ್ತಕ ‘ಐಯಾಮ್ ನೋ ಮೆಸ್ಸಾಯ’ ಅನಾವರಣಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss