Tuesday, August 16, 2022

Latest Posts

ಮತ್ತೆ ಶಿಷ್ಟಾಚಾರ ಮರೆತ ಕೆಸಿಆರ್​: ಮೋದಿ ಬಿಟ್ಟು ಸಿನ್ಹಾ ಆಹ್ವಾನಿಸಲು ತೆರಳಿದ ತೆಲಂಗಾಣ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತೆಲಂಗಾಣಕ್ಕೆ ಇಂದು ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿ ಕೆ. ಚಂದ್ರೇಶೇಖರ ರಾವ್ ಅವರು ತೆರಳದೆ ಪ್ರಧಾನಿಯ ಬದಲಾಗಿ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾದ ಯಶವಂತ್​ ಸಿನ್ಹಾ ಅವರನ್ನು ವಿಮಾನ ನಿಲ್ದಾಣಕ್ಕೆ ತೆರಳಿ ಆಹ್ವಾನಿಸಿದ್ದಾರೆ.

ಹೈದರಬಾದ್ ನಲ್ಲಿ ಇಂದಿನಿಂದ ಆರಂಭವಾಗಲಿರುವ ಭಾರತೀಯ ಜನತಾ ಪಕ್ಷದ ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಹೈದರಾಬಾದ್​ಗೆ ಆಗಮಿಸುತ್ತಿದ್ದಾರೆ.

ಆದರೆ ಪ್ರಧಾನಿ ಮೋದಿ ಅವರಿಗೂ ಕೆಲ ಗಂಟೆಗಳ ಮುನ್ನ ಹೈದರಾಬಾದಿನ ಬೇಗಂ ಪೇಟ್ ವಿಮಾನ ನಿಲ್ದಾಣಕ್ಕೆ ಬರಲಿರುವ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬರಮಾಡಿಕೊಳ್ಳಲು ತೆರಳಿದ್ದಾರೆ.

ಪ್ರಧಾನ ಮಂತ್ರಿಗಳು ಬಂದಾಗ ಸಾಮಾನ್ಯವಾಗಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಖುದ್ದಾಗಿ ಹೋಗಿ ಬರಮಾಡಿಕೊಳ್ಳುವುದು ಶಿಷ್ಟಾಚಾರದಿಂದ ಬಂದ ಪದ್ಧತಿಯಾಗಿದೆ. ಆದರೆ, ಈ ಹಿಂದೆ ಪ್ರಧಾನಿ ಮೋದಿ ಅವರು ಹೈದರಾಬಾದ್​ಗೆ 2 ಬಾರಿ ಭೇಟಿ ನೀಡಿದಾಗಲೂ ಅನಾರೋಗ್ಯ ಮತ್ತು ಕೆಲಸ ಒತ್ತಡ ಕಾರಣ ನೀಡಿ ಬರಮಾಡಿಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದರು. ಇದೀಗ ಮೂರನೇ ಸಲವೂ ಗೈರಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss