ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಕೇದಾರ್​ ಜಾಧವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್​ ಇಂಡಿಯಾದ ಹಿರಿಯ ಆಟಗಾರ ಕೇದಾರ್​ ಜಾಧವ್ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.

ಸೋಮವಾರ ಅವರು ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು.1500 ಗಂಟೆಗಳಿಂದ ನನ್ನ ವೃತ್ತಿಜೀವನದುದ್ದಕ್ಕೂ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನನ್ನನ್ನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಎಂದು ಪರಿಗಣಿಸಿ ಎಂದು ಕೇದಾರ್ ಜಾಧವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು.

39 ವರ್ಷದ ಕೇದಾರ್ ಜಾಧವ್ 2014 ಮತ್ತು 2020 ರ ನಡುವೆ ಭಾರತಕ್ಕಾಗಿ 73 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜಾಧವ್ 2019 ರ ವಿಶ್ವಕಪ್ ಆಡಿದ್ದರು. ಕೇದಾರ್ ಜಾಧವ್ ಭಾರತ ಪರ ಕೊನೆಯ ಬಾರಿಗೆ ಆಡಿದ್ದು 2020ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ. ಇದಾದ ಬಳಿಕ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಕೇದಾರ್ ಜಾಧವ್ 73 ಏಕದಿನ ಪಂದ್ಯಗಳಲ್ಲಿ 2 ಶತಕ ಮತ್ತು 6 ಅರ್ಧಶತಕ ಸೇರಿದಂತೆ 1389 ರನ್ ಗಳಿಸಿದ್ದಾರೆ. 9 ಟಿ20 ಪಂದ್ಯಗಳಲ್ಲಿ 122 ರನ್ ಗಳಿಸಿದ್ದಾರೆ.

ಫೆಬ್ರವರಿಯಲ್ಲಿ ಪುಣೆಯಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ವಿರುದ್ಧ ಮಹಾರಾಷ್ಟ್ರದ ಪರವಾಗಿ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು. ಜಾಧವ್ ಮಹಾರಾಷ್ಟ್ರದ 2023-24 ರ ರಣಜಿ ಟ್ರೋಫಿ ಅಭಿಯಾನದಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ 5 ಪಂದ್ಯಗಳಲ್ಲಿ 379 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದರು.

ಕೇದಾರ್ ಜಾಧವ್ 93 ಐಪಿಎಲ್ ಪಂದ್ಯಗಳನ್ನು ಆಡಿದ್ದು 1196 ರನ್ ಗಳಿಸಿದ್ದಾರೆ. ಅವರು 2018 ರಲ್ಲಿ ಐಪಿಎಲ್​ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಜಾಧವ್ 2010 ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ (ಈಗ ದೆಹಲಿ ಕ್ಯಾಪಿಟಲ್ಸ್), 2011 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು 2013 ಮತ್ತು 2015 ರ ನಡುವೆ ಡೆಲ್ಲಿ ಮತ್ತು ಆರ್​ಸಿಬಿ ಪರ ಆಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!