Wednesday, August 17, 2022

Latest Posts

ಮೇ 17ರಂದು ಕೇದಾರನಾಥ ದೇವಾಲಯ ಓಪನ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮೇ 17ರ ಬ್ರಾಹ್ಮಿ ಮೂಹೂರ್ತದಲ್ಲಿ ಕೇದಾರನಾಥ ದೇವಾಲಯದ ಬಾಗಿಲು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಎಂದು ಕೇದಾರ ಜಗದ್ಗುರುಗಳು ತಿಳಿಸಿದ್ದಾರೆ.
ಉತ್ತರಾಖಂಡದ ಉಖೀಮಠದ ಶ್ರೀ 1008 ರಾವಲ್ ಜಗದ್ಗುರುಗಳು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸನ್ನಿಧಿಯವರ ಆಶೀರ್ವಾದದೊಂದಿಗೆ ಕೇದಾರನಾಥ ದೇವಾಲಯದ ಬಾಗಿಲು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವರ್ಷಕ್ಕೊಮ್ಮೆ ದರುಶನ ನೀಡುವ ಕೇದಾರನಾಥೇಶ್ವರನ ದರ್ಶನಕ್ಕಾಗಿ ಭಕ್ತಾಧಿಗಳು ಕಾಯುತ್ತಿದ್ದಾರೆ.
ಕೇದಾರನಾಥ ದೇವಾಲಯಕ್ಕೆ ಪ್ರತಿ ವರ್ಷ ದೇಶವಿದೇಶದಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಕಳೆದ ಬಾರಿ ಕೊರೋನಾ ಲಾಕ್​ಡೌನ್​ ಹಿನ್ನೆಲೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!