ಮಕ್ಕಳಿಗೆ ಕೊಡುವ ಮೊಟ್ಟೆ ಮೇಲೂ ಕಣ್ಣು! ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಸಿಬ್ಬಂದಿ

ಹೊಸದಿಗಂತ ವರದಿ ಕಲಬುರಗಿ: ಅಂಗನವಾಡಿ ಕೇಂದ್ರಕ್ಕೆ ಜಮಾ ಆಗಿದ ಮೊಟ್ಟೆಯ ಹಣಕ್ಕೆ ಲಂಚ ಬೇಡಿಕೆಯಿಟ್ಟು, 6030 ರೂ ಲಂಚ ಪಡೆಯುವಾಗ ಇಬ್ಬರು ಮಹಿಳಾ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸ್ಟೇಷನ್ ಬಜಾರ ಅಂಗನವಾಡಿ ಕೇಂದ್ರದ ಟೀಚರ್ ಹೀನಾ ಹಾಗೂ ಯು.ಎಫ್.ಡಬ್ಲೂ.ಸಿ ಸೂಪರ್ವೈಸರ್ ಪಿಂಕುಬಾಯಿ ಗಾಯಕವಾಡ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿ. ಅಂಗನವಾಡಿ ಮಕ್ಕಳಿಗಾಗಿ ಸರ್ಕಾರ ನೀಡುವ ಮೊಟ್ಟೆಯಲ್ಲೂ ಸ್ಕ್ಯಾಮ್‌ ಮಾಡ್ತಿದ್ದಾರೆ, ಮಕ್ಕಳ ಊಟಕ್ಕೆ ಕೈ ಹಾಕಿದ್ದು ಕ್ಷಮಿಸೋಕಾಗೋದಿಲ್ಲ ಎಂದು ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ.