Wednesday, August 10, 2022

Latest Posts

“ಭರವಸೆ ಕಳೆದುಕೊಳ್ಳಬೇಡಿ ಬೆಂಗಳೂರಿಗರೇ… ನಾನು ನಿಮ್ಮೊಂದಿಗಿದ್ದೇನೆ”

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ಸೋಂಕಿತರ ಜೀವ ಉಳಿಸಲು ‘ಸೂದ್ ಫೌಂಡೇಶನ್’ ಹಗಲಿರುಳು ಕೆಲಸ ಮಾಡುತ್ತಿದೆ. ದೇಶದ ಯಾವುದೇ ಮೂಲೆಯಿಂದ ಬೆಡ್, ಆಕ್ಸಿಜನ್, ಔಷಧಬೇಕೆಂದು ಸಹಾಯಕೋರಿ ಸಂದೇಶ ಬಂದರೂ, ತಕ್ಷಣ ಪ್ರತಿಕ್ರಿಯಿಸಿ ಸಹಾಯ ಮಾಡುತ್ತಿದ್ದಾರೆ.

ಇದೀಗ ಬೆಂಗಳೂರಿನಲ್ಲಿ ಉಂಟಾದ ಆಕ್ಸಿಜನ್ ಕೊರತೆಯನ್ನು ನೀಗಿಸಲುಸ ಸೋನು ಸೂದ್ ಮುಂದಾಗಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು,, ಭರವಸೆಯನ್ನು ಕಳೆದುಕೊಳ್ಳಬೇಡಿ, ಜೀವಂತವಾಗಿಟ್ಟುಕೊಳ್ಳಿ.. ನಾನು ನಿಮ್ಮೊಂದಿದ್ದೇನೆ.  ತುರ್ತು ಸನ್ನಿವೇಶಗಳಲ್ಲಿ ಮನೆ ಬಾಗಲಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ಸೋನು ಸೂದ್ ತಿಳಿಸಿದ್ದು,  ಆಕ್ಸಿಜನ್ ಕೋರಿಕೆ ಸಲ್ಲಿಸಲು ವಾಟ್ಸ್ ಆಪ್ ನಂಬರ್ ಕೂಡ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss