spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ಮಲಗುವಾಗ ಇನ್ಮುಂದೆ ಹಾಸಿಗೆ ಪಕ್ಕ ಲಿಂಬು ಇಟ್ಟುಕೊಳ್ಳಿ… ಇದರಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?

- Advertisement -Nitte

ರಾತ್ರಿ ಮಲಗುವಾಗ ನಿಮ್ಮ ಪಕ್ಕದಲ್ಲಿ ಇನ್ಮುಂದೆ ಮೊಬೈಲ್ ಅಲ್ಲ ಒಂದು ಲಿಂಬು ಇಟ್ಟುಕೊಂಡು ಮಲಗಿ. ಏಕೆಂದರೆ ಇದರಿಂದ ತುಂಬಾ ಉಯೋಗವಿದೆ. ಲಿಂಬು ಹಣ್ಣಿನಲ್ಲಿರುವ ಸಿಟ್ರಿಕ್‌ ಆಮ್ಲ ನಮ್ಮ ದೇಹಕ್ಕೆ ನಾನಾ ರೀತಿಯ ಉಪಯೋಗಕಾರಿ. ಸೊಳ್ಳೆ ಕಡಿಯುವುದನ್ನೂ ಸಹ ಈ ಲಿಂಬು ತಡೆಯುತ್ತದೆ.

ಉಸಿರಾಟ:
ಲಿಂಬುವನ್ನು ಚಿಕ್ಕ ತುಂಡು ಮಾಡಿ ಅದನ್ನು ದಿಂಬಿನ ಪಕ್ಕದಲ್ಲಿ ಇಟ್ಟುಕೊಂಡು ಮಲಗಿ. ಹೀಗೆ ಮಾಡುವುದರಿಂದ ಸರಾಗವಾಗಿ ಉಸಿರು ತೆಗೆಯಬಹುದು. ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.

ರಕ್ತದೊತ್ತಡ:
ಲಿಂಬುವಿನ ಸುಗಂಧವು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತದೊತ್ತಡದ ರೋಗಿಗಳಿಗೆ ಸಹಾಯವಾಗಲಿದೆ.

ಸೊಳ್ಳೆ:
ಲಿಂಬುವನ್ನು ಹಾಸಿಗೆ ಪಕ್ಕ ಇಟ್ಟುಕೊಳ್ಳುವುದರಿಂದ ಸೊಳ್ಳೆ, ನೊಣಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ಸೊಳ್ಳೆಗೂ, ನೊಣಕ್ಕೂ ಲಿಂಬು ಪರಿಮಳ ವೈರಿಯಂತೆ.

ಶಾಂತ:
ಲಿಂಬುವನ್ನು ಕತ್ತರಿಸಿ ಹಾಸಿಗೆ ಬಳಿ ಇಡುವುದರಿಂದ ಅದರಲ್ಲಿನ ಆಂಟಿ ಬ್ಯಾಕ್ಟಿರಿಯಲ್ ಅಂಶಗಳು ಮನಸ್ಸನ್ನು ಶಾಂತವಾಗಿರುಸುತ್ತದೆ.

ವಾಂತಿ:
ಕೆಲವರಿಗೆ ಮಲಗಿದ ತಕ್ಷಣ ಹೊಟ್ಟೆ ತೊಳೆಸಿದಂತಾಗಿ, ವಾಂತಿ ಬಂದಂತಾಗುತ್ತದೆ. ಲಿಂಬುವನ್ನು ಪಕ್ಕಕ್ಕಿಟ್ಟು ಮಲಗಿದರೆ, ಅದರ ಪರಿಮಳ ಹೊಟ್ಟೆ ತೊಳೆಸಿದಂತಾಗುವುದನ್ನು ತಡೆಯುತ್ತದೆ.

ಫ್ರೆಶ್:
ಲಿಂಬು ಪರಿಮಳ ಮನಸ್ಸು ಹಾಗೂ ರೂಮ್ ನ್ನು ಫ್ರೆಶ್ ಆಗಿಸುತ್ತದೆ. ಲಿಂಬು ಪರಿಮಳಕ್ಕೆ ಹಾಯಾಗಿ ನಿದ್ದೆ ಬರುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss