Monday, August 8, 2022

Latest Posts

ಸ್ವಾತಂತ್ರ್ಯ ನಂತರ ಒಲಿಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಕೇಶವ್ ದತ್ ಇನ್ನಿಲ್ಲ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹಾಕಿ ದಂತಕಥೆ ಎಂದೇ ಹೆಸರುವಾಸಿಯಾಗಿದ್ದ, ಒಲಿಂಪಿಕ್‌ನಲ್ಲಿ ಎರಡು ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ ಕೇಶವ್ ದತ್ ಇಂದು ನಿಧನರಾಗಿದ್ದಾರೆ. 95 ವರ್ಷ ವಯಸ್ಸಾಗಿದ್ದ ಅವರು ಕೋಲ್ಕತಾದ ಸಂತೋಷ್‌ಪುರದಲ್ಲಿರುವ ನಿವಾಸದಲ್ಲಿ ದತ್ ಮಧ್ಯರಾತ್ರಿ 12.30 ರ ಸುಮಾರಿಗೆ ಮೃತಪಟ್ಟಿದ್ದಾರೆ.
ಭಾರತವು ಸ್ವಾತಂತ್ರ್ಯದ ನಂತರ ಒಲಿಂಪಿಕ್‌ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. 1948 ರ ಲಂಡನ್ ಕ್ರೀಡಾಕೂಟದಲ್ಲಿ ಇವರ ತಂಡಕ್ಕೆ ಚಿನ್ನ ಲಭಿಸಿತ್ತು. ನಂತರ 1952ರಲ್ಲಿ ಪುನಃ ಚಿನ್ನದ ಪದಕ ಇವರ ತಂಡದ್ದಾಗಿತ್ತು.
ಕೇಶವ್‌ ದತ್‌ ಅವರು 1951-1953ರವರೆಗೆ ಹಾಗೂ 1957-1958ರಲ್ಲಿ ‘ಮೋಹನ್ ಬಗಾನ್ ಹಾಕಿ ತಂಡ’ದ ನಾಯಕರಾಗಿದ್ದರು. ಈ 10 ವರ್ಷಗಳ ಅವಧಿಯಲ್ಲಿ ಆರು ಬಾರಿ ಹಾಕಿ ಲೀಗ್ ಮತ್ತು ಮೂರು ಬಾರಿ ಬೀಟನ್ ಕಪ್ ಗೆದ್ದಿದ್ದರು. 2019ರಲ್ಲಿ ಮೋಹನ್ ಬಗಾನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಗೌರವವನ್ನು ಪಡೆದ ಮೊದಲ ಫುಟ್ಬಾಲ್ ಹೊರತಾದ ಆಟಗಾರ ಎಂಬ ಹೆಗ್ಗಳಿಕೆ ಕೂಡ ಇವರದ್ದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss