Friday, July 1, 2022

Latest Posts

ಕೇರಳ ವಿಧಾನಸಭಾ ಚುನಾವಣೆ: ರಾಜ್ಯದ 9 ಕ್ಷೇತ್ರಗಳಲ್ಲಿ ಬಿಜೆಪಿ ಗಣನೀಯ ಸಾಧನೆ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಲಭಿಸದೇ ಇದ್ದರೂ, ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದೆ. ಅದರಂತೆ ಬಿಜೆಪಿಯು ಕೇರಳದ 9 ಮಂಡಲಗಳಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ.
ಮಂಜೇಶ್ವರ, ನೇಮಂ, ಪಾಲಕ್ಕಾಡು, ಆಟಿಂಗಲ್, ಚಾತನ್ನೂರು, ಕಳಕೂಟಂ, ವಟ್ಟಿಯೂರ್ ಕಾವು, ಕಾಸರಗೋಡು, ಮಲಯಂಪುಳ ಮಂಡಲಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ 6 ಮಂಡಲಗಳಲ್ಲಿ ಬಿಜೆಪಿಯು ಶೇಕಡಾ 30ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದು ಭಾರೀ ಸಾಧನೆ ಮಾಡಿದೆ.
ನೇಮಂ, ವಟ್ಟಿಯೂರ್ ಕಾವು, ಕಾಟಾಕಡ, ಆಟಿಂಗಲ್, ಕಳಕೂಟಂ, ತಿರುವನಂತಪುರ, ಚಿರಯನ್ ಕೀಯ್, ಚಾತನ್ನೂರು, ಕೋನ್ನಿ , ಚೆಂಗನ್ನೂರು, ಮಾವೇಲಿಕರ, ತೃಶೂರು, ಪುದುಕಾಡ್, ನಾಚಿಗ, ಇರಿಂಗಾಲಕುಡ, ಮಣಲೂರು, ಮಲಯಂಪುಳ, ಪಾಲಕ್ಕಾಡು, ಶೋರ್ನೂರು, ಏಲತ್ತೂರು, ಕಲ್ಲಿಕೋಟೆ ನಾರ್ತ್, ಮಂಜೇಶ್ವರ, ಕಾಸರಗೋಡು ವಿಧಾನಸಭಾ ಕ್ಷೇತ್ರಗಳಲ್ಲಿ 30 ಸಾವಿರಕ್ಕಿಂತಲೂ ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದೆ.
ಇದರಲ್ಲಿ ಮಂಜೇಶ್ವರ, ಕಾಸರಗೋಡು, ಪಾಲಕ್ಕಾಡು, ಮಲಯಂಪುಳ, ನೇಮಂ ಮಂಡಲಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳು ಬಿಜೆಪಿಗೆ ಲಭಿಸಿವೆ. ಪಕ್ಷವು ಕೇರಳದಲ್ಲಿ ಸೀಟು ಗಳಿಸದಿದ್ದರೂ ಮತ ಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇದೇ ವೇಳೆ ಪಕ್ಷವು ಮಂಜೇಶ್ವರ, ಕಾಸರಗೋಡು, ನೇಮಂ, ಪಾಲಕ್ಕಾಡು, ತೃಶೂರು, ಕಳಕೂಟಂ ಮೊದಲಾದ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳ ಅಪವಿತ್ರ ಮೈತ್ರಿಯು ಬಿಜೆಪಿಯ ಗೆಲುವಿಗೆ ತೊಡಕಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss