Monday, August 8, 2022

Latest Posts

ಕೇರಳ ವಿಧಾನಸಭೆ ಚುನಾವಣೆ: ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಆಸ್ತಿ ಘೋಷಣೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇರಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಣ್ಣೂರು ಜಿಲ್ಲೆಯ ಧರ್ಮದಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ತಮ್ಮ ಒಟ್ಟಾರೇ ಆಸ್ತಿ ಮೌಲ್ಯ 54 ಲ.ರೂ. ಎಂದು ಘೋಷಿಸಿಕೊಂಡಿದ್ದಾರೆ.
2020-21ರಲ್ಲಿ ತಮ್ಮ ಒಟ್ಟಾರೇ ಆದಾಯವನ್ನು 2.87,860 ರೂ. ಎಂದು ಅಫಿಡವಿಟ್ ನಲ್ಲಿ ತೋರಿಸಿದ್ದಾರೆ. ಆಕೆಯ ಪತ್ನಿ ಕಮಲಾ ಥಲಾಸೆರಿ ಶಾಖೆಯ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 5, 47, 803,21 ರೂ ನಗದು ಹೊಂದಿದ್ದು, ಒಟ್ಟಾರೆಯಾಗಿ 35 ಲಕ್ಷ ಮೊತ್ತದ ಆಸ್ತಿ ಹೊಂದಿದ್ದಾರೆ. ತಮ್ಮ ವಿರುದ್ಧದ ಎರಡು ಕೇಸ್ ಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವುದಾಗಿ ಪಿಣರಾಯ್ ವಿಜಯನ್ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
ಮನೆ, ಎರಡು ಫ್ಲಾಟ್ ಸೇರಿದಂತೆ 51.95 ಲಕ್ಷ ಮೊತ್ತದ ಸ್ಥಿರಾಸ್ತಿ ಹಾಗೂ ಥಲಾಸೆರಿ ಶಾಖೆಯ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 78,048, 51 ನಗದು, ಮಲಯಾಳಂ ಕಮ್ಯೂನಿಕೇಷನ್ ಲಿಮಿಟೆಡ್ ನಲ್ಲಿ 10 ಸಾವಿರ ಮೊತ್ತದ 1 ಸಾವಿರ ಷೇರುಗಳು, ಕೆಐಎಎಲ್ ನಲ್ಲಿ 1 ಲಕ್ಷ ರೂ. ಮೊತ್ತದ ಷೇರು ಸೇರಿದಂತೆ 2.04 ಲಕ್ಷ ಮೊತ್ತದ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss