Saturday, August 13, 2022

Latest Posts

ಕೇರಳ ವಿಧಾನಸಭಾ ಚುನಾವಣೆ: ಏ.4, 5, 6 ರಂದು ಗಡಿಗಳ ಸೀಲ್

ಹೊಸದಿಗಂತ ವರದಿ, ಕಾಸರಗೋಡು:

ವಿಧಾನಸಭಾ ಚುನಾವಣೆ ಸಂಬಂಧ ಏ.4, 5, 6 ರಂದು ಕಾಸರಗೋಡು ಜಿಲ್ಲೆಯ ಗಡಿಗಳನ್ನು ಸೀಲ್ ಮಾಡಲಾಗುವುದು.
ಚುನಾವಣೆಯನ್ನು ಸ್ವತಂತ್ರ , ಸುರಕ್ಷೆ ಸಹಿತವಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಂಗಳೂರು, ಕೊಡಗು, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದರು.
ಗಡಿ ಪ್ರದೇಶಗಳಲ್ಲಿ ತಪಾಸಣೆ ಕಡ್ಡಾಯಗೊಳಿಸಲಾಗುವುದು. ಪೊಲೀಸ್, ಅಬಕಾರಿ, ಕಂದಾಯ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ತಪಾಸಣೆ ನಡೆಸುವರು. ಶಾಶ್ವತ ಅಪರಾಧಿಗಳ ಮಾಹಿತಿ ಸಂಗ್ರಹಿಸಿ ಗಡಿ ಪ್ರದೇಶಗಳು ಪರಸ್ಪರ ಹಸ್ತಾಂತರ ನಡೆಸಲು ಸಭೆಯು ನಿರ್ಧರಿಸಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಸಹಾಯಕ ಅಬಕಾರಿ ಕಮೀಷನರ್ ಬಾಬು ವರ್ಗೀಸ್, ಕಸ್ಟಮ್ಸ್ ಕಮೀಷನರ್ ಇಮಾಮುದ್ದೀನ್ ಅಹಮ್ಮದ್, ಆದಾಯ ತೆರಿಗೆ ಅಧಿಕಾರಿ ಪ್ರೀತಾ ನಂಬ್ಯಾರ್, ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್, ಎಸ್.ಪಿ., ಡೆಪ್ಯೂಟಿ ಅಬಕಾರಿ ಕಮೀಷನರ್, ಕಣ್ಣೂರು ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎನ್.ದೇವಿದಾಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಎಸ್.ಪಿ., ಮಂಗಳೂರು ಅಬಕಾರಿ ಕಮೀಷನರ್, ಕಸ್ಟಮ್ಸ್ ಕಮೀಷನರ್, ಆದಾಯ ತೆರಿಗೆ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss