Sunday, August 14, 2022

Latest Posts

ರಾಕೆಟ್​ ದಾಳಿಯಲ್ಲಿ ಕೇರಳ ಮೂಲದ ಮಹಿಳೆ ಸಾವು: ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡ ಇಸ್ರೇಲ್ ಸರ್ಕಾರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್ ಮೇಲೆ ಪ್ಯಾಲೇಸ್ತೀನ್​ ರಾಕೆಟ್ ದಾಳಿ ನಡೆಸಿದ್ದ ವೇಳೆ ಕೇರಳ ಮೂಲದ ಮಹಿಳೆ ಸಾವನ್ನಪ್ಪಿದ್ದು, ಇದೀಗ ಆಕೆಯ ಕುಟುಂಬದ ಸಂಪೂರ್ಣ ಜವಾಬ್ದಾರಿ ಇಸ್ರೇಲ್ ಸರ್ಕಾರ ಹೊತ್ತುಕೊಂಡಿದೆ.
ಇಸ್ರೇಲ್​ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಸೌಮ್ಯ ಸಂತೋಷ ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಗೆ ಸಂಬಂದಿಸಿದಂತೆ ಮಾತನಾಡಿರುವ ಇಸ್ರೇಲ್​ ಭಾರತದ ರಾಯಭಾರಿ ರೋನಿ ಯೆಡಿಡಿಯಾ ಕ್ಲೈನ್ ಮಾಹಿತಿ ಹಂಚಿಕೊಂಡಿದ್ದಾರೆ.

ಘಟನೆಯಲ್ಲಿ ಸಾವನ್ನಪ್ಪಿರುವ ಮಹಿಳೆಯ ಮೃತದೇಹವನ್ನ ಏರ್​ಲೈನ್ಸ್ ಮೂಲಕ ಕೇರಳಕ್ಕೆ ಶುಕ್ರವಾರ ರಾತ್ರಿ ರವಾನೆ ಮಾಡಲಾಗುವುದು ಎಂದಿರುವ ಅವರು, ಕುಟುಂಬದ ಸಂಪೂರ್ಣ ಜವಾಬ್ದಾರಿ ನಮ್ಮ ಅಧಿಕಾರಿಗಳು ಹೊತ್ತುಕೊಳ್ಳಲಿದ್ದಾರೆ. ಘಟನೆಯ ನಷ್ಟ ಸರಿದೂಗಿಸಲು ಅಸಾಧ್ಯ. ಆದರೆ ಇದಕ್ಕೆ ಎಲ್ಲ ರೀತಿಯ ಪರಿಹಾರ ನೀಡಲು ನಾವು ಸಿದ್ಧ ಎಂದು ಅವರು ತಿಳಿಸಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ದಕ್ಷಿಣ ಇಸ್ರೇಲ್​ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು. ಗಾಜಾ ಪಟ್ಟಿಯ ಗಡಿ ಪ್ರದೇಶವಾದ ಅಶ್ಕೆಲೋನ್‌ ಮೇಲೆ ಪ್ಯಾಲೆಸ್ತೀನಿಯನ್ ಬಂಡುಕೋರರು ನಡೆಸಿದ ದಾಳಿಯಿಂದ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ, ಮಹಿಳೆ ಪ್ರಾಣ ಕಳೆದುಕೊಂಡಿದ್ದಳು.
ಕಳೆದ ಏಳು ವರ್ಷಗಳಿಂದ ಗಂಡನೊಂದಿಗೆ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದ ಸೌಮ್ಯಗೆ ಒಂಬತ್ತು ವರ್ಷದ ಮಗುವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss