ಅಪ್ರಾಪ್ತ ಬಾಲಕರ ಮೇಲೆ ಅತ್ಯಾಚಾರ ಎಸಗಿದ ಕ್ರೈಸ್ತ ಪಾದ್ರಿಗೆ 18 ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐದು ವರ್ಷಗಳ ಹಿಂದೆ ಕೊಲ್ಲಂ ಜಿಲ್ಲೆಯ ನಾಲ್ವರು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕ್ರೈಸ್ತ ಪಾದ್ರಿಯೊಬ್ಬರಿಗೆ ಕೇರಳದ ಕೊಲ್ಲಂ ನ್ಯಾಯಾಲಯ 18 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಚೆನ್ನೈ ಮೂಲದ ಎಸ್‌ಡಿಎಂ ಮೈನರ್ ಸೆಮಿನರಿಯ ಸದಸ್ಯ ಫಾದರ್ ಥಾಮಸ್ ಪರೆಕ್ಕುಳಂ (35) ಶಿಕ್ಷೆಗೆ ಒಳಗಾದ ಅಪರಾಧಿ. ಈತನ ವಿರುದ್ಧ ಪುತ್ತೂರು ಪೊಲೀಸರು ಭಾರತೀಯ ದಂಡನೆಯ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದರು.
ಘಟನೆಯ ಸಮಯದಲ್ಲಿ 16 ವರ್ಷ ವಯಸ್ಸಿನವರಾಗಿದ್ದ ನಾಲ್ವರು ಬಾಲಕರು ಪುಲ್ಲಮಾಲಾದಲ್ಲಿ ನಡೆದ ಸೆಮಿನರಿನಲ್ಲಿ ಆಭಗಿಯಾಗಿದ್ದರು. ಈ ವೇಳೆ ಆರೋಪಿ ರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ.
ಆತ ಹದಿಹರೆಯದ ಯುವಕರ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಮೂರು ಪ್ರಕರಣಗಳಲ್ಲಿ ತಲಾ ಐದು ವರ್ಷ ಹಾಗೂ ನಾಲ್ಕನೇ ಪ್ರಕರಣದಲ್ಲಿ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಮತ್ತು ಪ್ರತಿಯೊಬ್ಬ ಲೈಂಗಿಕ ದಾಳಿಯಲ್ಲಿ ಸಂತ್ರಸ್ತರಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಸೂಚಿಸಿದೆ.
ಸಂತ್ರಸ್ತ ಹುಡುಗರು ಲೈಂಗಿಕ ದಾಳಿಯಿಂದಾಗಿ ಮಾನಸಿಕ ಮತ್ತು ದೈಹಿಕ ಆಘಾತ ಹಾಗೂ ಅಪಾರ ನೋವು ಅನುಭವಿಸಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವುದು ಅವಶ್ಯಕ” ಎಂದು ನ್ಯಾಯಾಲಯ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!