ಕೇರಳ ಚರ್ಚ್ ಕೌನ್ಸಿಲ್‌ ಸಭೆ: ಬಲವಂತದ ಮತಾಂತರ ಖಂಡಿಸುವ ನಿರ್ಣಯ ಅಂಗೀಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಷಪ್‌ ಗಳ ಅಡಿಯಲ್ಲಿಕೇರಳದ ಚರ್ಚ್‌ ಕೌನ್ಸಿಲ್‌ ಸಿನೋಡ್‌ ಸಭೆ ಸೇರಿದ್ದು ಬಲವಂತದ ಅಥವಾ ಪ್ರೇರಿತ ಮತಾಂತರಗಳನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಇದರೊಂದಿಗೆ ಇತರ ಎರಡು ನಿರ್ಣಯಗಳನ್ನೂ ಅಂಗೀಕರಿಸಲಾಗಿದ್ದು ಧರ್ಮ, ಭಾಷೆ ಅಥವಾ ಸಂಸ್ಕೃತಿಯ ಹೆಸರಿನಲ್ಲಿ ಹಿಂಸಾಚಾರ ಮತ್ತು ಗಲಭೆಗಳನ್ನು ಖಂಡಿಸುವ ನಿರ್ಣಯ ಹಾಗೂ ಭಾರತದ ಏಕತೆಯ ಪ್ರಚಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮತ್ತು ಭಾರತದ ಸಂವಿಧಾನವನ್ನು ಅಕ್ಷರ ಮತ್ತು ಆತ್ಮದಲ್ಲಿ ಎತ್ತಿಹಿಡಿಯುವ ನಿರ್ಣಯವನ್ನೂ ಸಿನೋಡ್‌ ನಲ್ಲಿ ಅಂಗೀಕರಿಸಲಾಗಿದೆ.

ಸಾಮಾಜಿಕ ಸಂವಾದಗಳು ಮತ್ತು ಸಾಮಾಜಿಕ ಏಕೀಕರಣಕ್ಕೆ ಕಾರಣವಾಗುವ ಕಾರ್ಯವನ್ನು ನಡೆಸಲು ಸಹ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗೂ ಭಾರತದ ಎಲ್ಲಾ ಬಿಷಪ್‌ಗಳು ಒಟ್ಟಾಗಿ ರಾಷ್ಟ್ರದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಪ್ರಧಾನ ಮಂತ್ರಿಯನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿವೆ.

ಈ ಸಭೆಯಲ್ಲಿ RSS ಆಲ್ ಇಂಡಿಯಾ ಔಟ್ ರೀಚ್ ಟೀಮ್ (ಸಂಪರ್ಕ ಮಂಡಲ) ಸದಸ್ಯ ರವಿಕುಮಾರ್, ಜಯಕುಮಾರ್ ಮತ್ತು ಶ್ರೀಕುಮಾರ್ ಅವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!