ಮಹಿಳಾ ಪೊಲೀಸ್ ಅಧಿಕಾರಿಯ ತಾಯಿ ಹೃದಯ, ಆರೋಪಿ ಮಗುವಿಗೆ ಹಾಲುಣಿಸಿ ಔದಾರ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಹೆಣ್ಣಾದವಳು ಮೊದಲು ತಾಯಿ, ನಂತರವೇ ಅಧಿಕಾರಿ. ಇಲ್ಲೊಬ್ಬ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಆರೋಪಿ ಮಗುವಿಗೆ ಹಾಲುಣಿಸಿ ಔದಾರ್ಯ ಮೆರೆದ ಘಟನೆ ಕೇರಳದಲ್ಲಿ ನಡೆದಿದೆ.

ಎಲ್ಲರ ಮನ ತಟ್ಟಿರುವ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಡಿಂಗ್‌ ಆಗಿದೆ. ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ಜೈಲು ಸೇರಿದ್ದು, ತೀವ್ರ ಅಸ್ವಸ್ಥಗೊಂಡಿದ್ದರಿಂದ ಆಕೆಯನ್ನು ಎರ್ನಾಕುಲಂನ ಸರ್ಕಾರಿ ಜನರಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಹಿಳೆಯ ನಾಲ್ಕು ತಿಂಗಳ ಮಗು ಹಸಿವಿನಿಂದ ಅಳುತ್ತಿದ್ದನ್ನು ಕಂಡ ಕೊಚ್ಚಿ ಪೊಲೀಸ್‌ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಎಂ.ಎ.ಆರ್ಯ ಅವರು ಮಗುವನ್ನು ತನ್ನ ಮಡಿಲಲ್ಲಿ ಮಲಗಿಸಿ ಆರೈಕೆ ಮಾಡಿದ್ದಾರೆ. ಅಳುತ್ತಿದ್ದ ಮಗುವಿಗೆ ತನ್ನ ಎದೆ ಹಾಲುಣಿಸಿ ಹಸಿವು ನೀಗಿಸಿದ ಆರ್ಯ ಅವರಿಗೆ ಪ್ರಶಂಸೆಯ ಸುರಿಮಳೆಯೇ ಬರುತ್ತಿದೆ.

ಮಹಿಳೆಯ ಇತರ ಮೂವರು ಮಕ್ಕಳಿಗೆ ಪೊಲೀಸ್ ಠಾಣೆ ಸಿಬ್ಬಂದಿ ಊಟ ನೀಡಿ, ಆರೈಕೆ ಕೇಂದ್ರಕ್ಕೆ ಕರೆದೊಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!