Monday, June 27, 2022

Latest Posts

ಕೇರಳ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ: ಕಾಸರಗೋಡು ಜಿಲ್ಲೆಗೆ ಶೇ.82.64

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶವು ಬುಧವಾರ ಪ್ರಕಟಗೊಂಡಿದ್ದು , ಕಾಸರಗೋಡು ಜಿಲ್ಲೆಗೆ ಶೇಕಡಾ 82.64 ಫಲಿತಾಂಶ ಬಂದಿದೆ. ಮುಕ್ತ ವಿದ್ಯಾಲಯಗಳಿಂದ ಶೇಕಡಾ 59.04 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ.
ಹೈಯರ್ ಸೆಕೆಂಡರಿ ವಿಭಾಗದ 106 ಶಾಲೆಗಳಿಂದ 14,115 ಮಂದಿ ಪರೀಕ್ಷೆ ಬರೆದಿದ್ದು , ಇವರಲ್ಲಿ 11,665 ತೇರ್ಗಡೆ ಹೊಂದಿದರು. 1286 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಪಡೆದಿದ್ದಾರೆ. ಮುಕ್ತ ವಿದ್ಯಾಲಯ ವಿಭಾಗದಲ್ಲಿ 1543 ಮಂದಿ ಪರೀಕ್ಷೆಗೆ ಹಾಜರಾಗಿದ್ದು , 911 ಮಂದಿ ತೇರ್ಗಡೆ ಹೊಂದಿದರು. ಮೂರು ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಗಳಿಸಿದ್ದಾರೆ.
ವಿಎಚ್ಎಸ್ಇ ವಿಭಾಗದ ವಿಶೇಷ ಸ್ಕೀಮ್ ನಲ್ಲಿ ಶೇಕಡಾ 73.93 ಫಲಿತಾಂಶ ಲಭಿಸಿದೆ. ಈ ಮೂಲಕ 886 ಮಂದಿ ಪರೀಕ್ಷೆಗೆ ಹಾಜರಾಗಿದ್ದು , 655 ಮಂದಿ ತೇರ್ಗಡೆ ಹೊಂದಿದರು. ವಿಎಚ್ಎಸ್ ಸಿ ಕಂಟೀನ್ಯೂವಸ್ ಇವಾಲ್ಯೂಷನ್ ಆಂಡ್ ಗ್ರೇಡಿಂಗ್ ಎನ್ ಕ್ಯೂಎಸ್ ಸ್ಕೀಮ್ ನಲ್ಲಿ ಶೇಕಡಾ 56.07 ರಿಸಲ್ಟ್ ಬಂದಿದೆ. ಪರೀಕ್ಷೆಗೆ ಹಾಜರಾದ 305 ಮಂದಿ ವಿದ್ಯಾರ್ಥಿಗಳಲ್ಲಿ 171 ಮಂದಿ ತೇರ್ಗಡೆ ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss