Saturday, June 25, 2022

Latest Posts

ಕೇರಳ ಶಾಸಕ ಪಿ.ಟಿ. ಥಾಮಸ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೃಕ್ಕಾಕರ ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸುವ ಕೇರಳ ವಿಧಾನಸಭೆಯ ಶಾಸಕ ಪಿ.ಟಿ. ಥಾಮಸ್ ಇಂದು ನಿಧನರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಥಾಮಸ್ ಅವರು ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದು, ರಾಜಕೀಯ ಗಣ್ಯರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿದ್ದರು. ಥಾಮಸ್ ಅವರಿಗೆ ಕ್ಯಾನ್ಸರ್ ಬಾಧಿಸಿದ್ದ ಬಗ್ಗೆ ಸಹೋದ್ಯೋಗಿಗಳಿಗೆ ತಿಳಿದಿತ್ತು. ಆದರೆ ಅವರು ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದಾರೆ ಎಂದು ಎಲ್ಲರೂ ಆಶಿಸಿದ್ದರು.
ಕೆಎಸ್‌ಯು ಮೂಲಕ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಥಾಮಸ್ ಅವರು ನಂತರ ಕಾಂಗ್ರೆಸ್‌ನಲ್ಲಿ ಎಲ್ಲಾ ಹಂತದಲ್ಲಿಯೂ ಕೆಲಸ ಮಾಡಿದರು. ಥಾಮಸ್ ಅವರು ಬಹುದೊಡ್ಡ ಪರಿಸರವಾದಿ ಮತ್ತು ಲೇಖಕರೂ ಆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss