ಕೇರಳ ಪ್ಲಸ್ ಟು ಪರೀಕ್ಷಾ ಫಲಿತಾಂಶ ಪ್ರಕಟ: ಶೇ. 83.87 ವಿದ್ಯಾರ್ಥಿಗಳು ಉತ್ತೀರ್ಣ

ಹೊಸದಿಗಂತ ವರದಿ ಕಾಸರಗೋಡು:

2021-22ನೇ ಶೈಕ್ಷಣಿಕ ವರ್ಷದ ಕೇರಳ ಪ್ಲಸ್ ಟು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅದರಂತೆ ಈ ಬಾರಿ ರಾಜ್ಯದಲ್ಲಿ ಶೇಕಡಾ 83.87 ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿಕ್ಷಣ ಖಾತೆ ಸಚಿವ ವಿ.ಶಿವನ್ ಕುಟ್ಟಿ ಅವರು ಮಂಗಳವಾರ ತಿರುವನಂತಪುರದ ಪಿ.ಆರ್.ಚೇಂಬರ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು.

ವಿಎಚ್ಎಸ್ಇ ವಿಭಾಗದಲ್ಲಿ ಶೇಕಡಾ 78.26 ಫಲಿತಾಂಶ ಬಂದಿದೆ. ರೆಗ್ಯುಲರ್ ವಿಭಾಗದಲ್ಲಿ 3,61,091 ಮಂದಿ ವಿದ್ಯಾರ್ಥಿಗಳು ಪ್ಲಸ್ ಟು ಪರೀಕ್ಷೆ ಬರೆದಿದ್ದು , ಅದರಲ್ಲಿ 3,02,865 ಮಂದಿ ಉತ್ತೀರ್ಣರಾದರು. ರಾಜ್ಯದ 14 ಜಿಲ್ಲೆಗಳ 28,450 ಮಂದಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ದೊರಕಿದೆ. ವಿಎಚ್ಎಸ್ಇ ವಿಭಾಗದಲ್ಲಿ ಪರೀಕ್ಷೆ ಬರೆದ 29,711 ಮಂದಿ ವಿದ್ಯಾರ್ಥಿಗಳ ಪೈಕಿ 23,257 ಮಂದಿ ಮಕ್ಕಳು ಪಾಸಾಗಿದ್ದಾರೆ. ಈ ವಿಭಾಗದಲ್ಲಿ 178 ಮಂದಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಲಭಿಸಿದೆ. ಜುಲೈ 25ರಿಂದ ಪ್ಲಸ್ ಟು ಸೇ ಪರೀಕ್ಷೆ ನಡೆಯಲಿರುವುದಾಗಿ ಶಿಕ್ಷಣ ಸಚಿವರು ವಿವರಣೆಯಿತ್ತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!