ಪುಟ್ಟು…ವ್ಹಾವ್…ಇದರ ರುಚಿ ಸವಿದವನೇ ಬಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೌದು ಇದು ಕೇರಳದ ಅತ್ಯಂತ ಫೇಮಸ್ ತಿಂಡಿ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ `ಪುಟ್ಟು’ ತಿಂಡಿ ಮಾಡುತ್ತಿದ್ದಾರೆ. ಈ ಪುಟ್ಟು-ಗಸಿ ಪ್ರತಿಯೊಬ್ಬರೂ ಸರಳವಾಗಿ ಮನೆಯಲ್ಲೇ ತಯಾರು ಮಾಡಬಹುದು…ಹೇಗೆ ಗೊತ್ತಾ…?

ಬೇಕಾಗುವ ಸಾಮಾಗ್ರಿಗಳು:
1/2 ಕೆ.ಜಿ ಬೆಳ್ತಿಗೆ ಅಕ್ಕಿ
ತುರಿದ ತೆಂಗಿನ ಕಾಯಿ
ರುಚಿಗೆ ತಕ್ಕ ಉಪ್ಪು
ನೀರು
ಸಕ್ಕರೆ

ಪುಟ್ಟು ಮಾಡುವ ವಿಧಾನ

ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿಯನ್ನು ಸೋಸಿ ಒಂದು ಬಟ್ಟೆಯಲ್ಲಿ ಹರಡಿಕೊಳ್ಳಿ. ನೀರು ಆರಿದ ಮೇಲೆ ಪುಡಿಮಾಡಿಟ್ಟುಕೊಳ್ಳಿ. ಒಂದು ವಿಚಾರ ನೆನಪಿರಲಿ. ನುಣ್ಣನೆಯ ಪುಡಿಯಾಗದಂತೆ ಜಾಗ್ರತೆ ವಹಿಸಿ. ಉಪ್ಪನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಆ ನೀರನ್ನು ಹಿಟ್ಟಿನ ಮೇಲೆ ಚಿಮುಕಿಸಿ ಕಲಸಿಟ್ಟುಕೊಳ್ಳಿ.

ಪುಟ್ಟು ಮಾಡುವ ಪಾತ್ರೆಯನ್ನು ತೆಗೆದುಕೊಂಡು, ಪಾತ್ರೆಯ ತಳಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹಾಕಿ ಒಲೆಯಮೇಲಿಟ್ಟುಕೊಳ್ಳಿ. ಪಾತ್ರೆಯ ಮೇಲ್ಭಾಗದಲ್ಲಿರುವ ಕೊಳವೆಯಾಕೃತಿಯ ತಳಭಾಗಕ್ಕೆ ಸ್ವಲ್ಪ ತೆಂಗಿನ ತುರಿಯನ್ನು ಉದುರಿಸಿ. ನಂತರ ಅಕ್ಕಿ ಹಿಟ್ಟನ್ನು ಹಾಕಿ. ತದನಂತರ ಮತ್ತೆ ತೆಂಗಿನ ತುರಿಯನ್ನು ಸೇರಿಸಿ…ಈ ರೀತಿ ಪದರ ಪದರವಾಗಿ ಅಕ್ಕಿಹಿಟ್ಟು ಹಾಗೂ ತೆಂಗಿನ ತುರಿಯನ್ನು ಸೇರಿಸುತ್ತಾ ಬನ್ನಿ. ಮೇಲ್ಭಾಗದಲ್ಲಿ ತೆಂಗಿನ ತುರಿಯನ್ನು ಹಾಕಿ ಪಾತ್ರೆಯ ಮುಚ್ಚಳ ಹಾಕಿ ಬೇಯಲು ಇಡಿ. ಸರಿಯಾಗಿ ಹಬೆ ಬಂದನಂತರ ಅಂದರೆ ಹದಿನೈದರಿಂದ ಇಪ್ಪನ್ನು ನಿಮಿಷ ಬಿಟ್ಟು ಒಲೆಯಿಂದ ಕೆಳಗಿಡಿ. ನಿಧಾನವಾಗಿ ಕೊಳವೆಯಿಂದ ಪುಟ್ಟನ್ನು ಹಾಟ್ ಬಾಕ್ಸ್‍ಗೆ ಸುರಿಯಿರಿ. ಪುಟ್ಟು ರೆಡಿ. ಬಿಸಿ ಬಿಸಿಯಾದ ಪುಟ್ಟು ಹಾಗೂ ಸಕ್ಕರೆ, ತುಪ್ಪದೊಂದಿಗೆ ಸವಿಯಲು ರುಚಿ. ಕೆಂಪು ಕಡಲೆ ಹಾಗೂ ನೀರುಳ್ಳಿ ಸೇರಿಸಿ ಮಾಡಿದ ಗಸಿಯೊಂದಿಗೆ ಸವಿಯಲು ಬಲುರುಚಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!