Wednesday, August 10, 2022

Latest Posts

ಇಸ್ರೊ ಜತೆಗೂ ‘ವಸೂಲಿ’ಗೆ ಇಳಿದ ಕೇರಳದ ಸ್ಥಳೀಯರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ಇಸ್ರೋಗೆ ಸೇರಿದ ಟ್ರಕ್ಕುಗಳನ್ನು ಕೇರಳದಲ್ಲಿ ಒಂದಿಷ್ಟು ಕಾರ್ಮಿಕರು ತಡೆದು ನಿಲ್ಲಿಸುತ್ತಾರೆ. ಇಸ್ರೋದಂಥ ಸಂಸ್ಥೆ ಟ್ರಕ್ಕಿನಲ್ಲಿದ್ದ ಉಪಕರಣಗಳನ್ನು ಇಳಿಸಲಾಗದೇ ಒದ್ದಾಡಿತು.

ಇಷ್ಟಕ್ಕೂ ಆಗಿದ್ದೇನು ಎಂದು ತಿಳಿದುಕೊಳ್ಳುವುದಕ್ಕೆ ನೀವು ‘ನೊಕ್ಕು ಕೂಲಿ’ ಎಂಬ ಅಕ್ರಮ ವಸೂಲಿ ಪದ್ಧತಿಯೊಂದರ ಬಗ್ಗೆ ತಿಳಿದುಕೊಳ್ಳಬೇಕು.

ಸಾಮಾನುಗಳನ್ನು ಹೇರಿಕೊಂಡು ಲಾರಿಯೊಂದು ಬಂದರೆ, ಅದರ ಮಾಲೀಕ ತನ್ನ ಕಾರ್ಮಿಕರಿಂದ ಅದನ್ನು ಇಳಿಸುವಂತಿಲ್ಲ. ಟ್ರೇಡ್‌ ಯೂನಿಯನ್ ಗಳ ಸದಸ್ಯರಿಂದಲೇ ಅದನ್ನು ಅನ್ ಲೋಡ್‌ ಮಾಡಿಸಬೇಕು. ಅದಕ್ಕವರು ಕೇಳುವ ಕೂಲಿ ಕೊಡಲೇಬೇಕು.

ಕೇರಳದಲ್ಲಿ ಈಗಾಗಲೇ ‘ನೂಕ್ಕು ಕೂಲಿ’ ನಿಷೇಧಿಸಲಾಗಿದ್ದು, ಆದರೂ ಇಸ್ರೋಗೆ ಸೇರಿದ್ದ ಟ್ರಕ್ ಒಂದನ್ನು ಸ್ಥಳೀಯರು ತಡೆದು, ತಮಗೆ ‘ನೋಕ್ಕು ಕೂಲಿ’ ಕೊಡಬೇಕೆಂದು ತಾಕೀತು ಮಾಡಿರುವ ಘಟನೆ ನಡೆದಿದೆ.

ತಿರುವನಂಪುರಂನ ‘ತುಂಬಾ’ ಎಂಬಲ್ಲಿರುವ ಇಸ್ರೊ ಕೇಂದ್ರಕ್ಕೆ ಟ್ರಕ್ ಒಂದರಲ್ಲಿ ಕೆಲ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಜನರ ಗುಂಪು ರಸ್ತೆಯ ಮೇಲೆ ಸೇರಿ ಟ್ರಕ್​ ಅಡ್ಡಗಟ್ಟಿ, ಅನ್​ಲೋಡ್ ಮಾಡುವ ಮೊದಲು ‘ನೊಕ್ಕು ಕೂಲಿ’ ಕೊಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಎಂದು ಇಸ್ರೊ ಉದ್ಯೋಗಿ ರಾಜೇಶ್ವರಿ ಮಾಹಿತಿ ನೀಡಿದ್ದಾರೆ.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಟ್ರಕ್ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಇಸ್ರೋ ಅಧಿಕಾರಿಗಳು ದೂರು ಸಲ್ಲಿಸಿದ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ, ಜನರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಂತರ ಟ್ರಕ್ ಇಸ್ರೊ ಪ್ರಾಂಗಣದೊಳಗೆ ಪ್ರವೇಶಿಸಲು ಸಾಧ್ಯವಾಯಿತು ಎಂದು ತುಂಬಾ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ಕೇರಳ ಹೈಕೋರ್ಟ್ ಕೆಲವು ದಿನಗಳ ಹಿಂದಷ್ಟೇ ‘ನೊಕ್ಕು ಕೂಲಿ’ ಪದ್ಧತಿಗೆ ಮಂಗಳ ಹಾಡಿತ್ತು. ಆದರೆ ಅಕ್ಷರಸ್ಥರೆಂದು ಹೊಗಳಿಸಿಕೊಳ್ಳುವ ರಾಜ್ಯದಲ್ಲಿ ನಿಯಮಗಳಿಗೆ ವಿರುದ್ಧವಾಗಿ ಇಂಥದೊಂದು ‘ವಸೂಲಿ’ ಪದ್ಧತಿ ಜಾರಿಯಲ್ಲಿರುವುದು ಜಾಹೀರಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss