Tuesday, August 9, 2022

Latest Posts

ಚರ್ಚೆಗೆ ಕಾರಣವಾಗಿದೆ ಕೇರಳದ ನಡೆ: ಬಕ್ರೀದ್ ಕಾರಣಕ್ಕೆ ಲಾಕ್ಡೌನ್ ಸಡಿಲ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇರಳದಲ್ಲಿ ದಿನಕ್ಕೆ ಸರಾಸರಿ 13,000 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಆರು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆದ ಸಭೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಯದೇ ಇರುವುದು ಆತಂಕಕ್ಕೆ ಕಾರಣ ಎಂದು ಹೇಳಿದ್ದಾರೆ. ಇವೆಲ್ಲದರ ನಡುವೆ ಬಕ್ರೀದ್ ಆಚರಣೆ ಪ್ರಯುಕ್ತ ಕೇರಳ ಸರ್ಕಾರ ಅಲ್ಲಿ ಜಾರಿಯಲ್ಲಿದ್ದ ವಾರಾಂತ್ಯ ಬಿಗಿ ನಿಯಮಗಳನ್ನು ಸಡಿಲಿಸಿರುವುದು ಚರ್ಚೆಗೆ ಕಾರಣವಾಗಿದೆ. 

ಜುಲೈ 18, 19 ಮತ್ತು 20ರಂದು ಕೇರಳದಲ್ಲಿ ಈವರೆಗೆ ಇರುವ ಕೋವಿಡ್ ನಿಯಂತ್ರಣ ಕ್ರಮಗಳು ಸಡಿಲವಾಗಲಿವೆ. ಈ ದಿನಗಳಲ್ಲಿ ಕೇವಲ ಅವಶ್ಯ ಸೇವೆಗಳಷ್ಟೇ ಅಲ್ಲದೇ ವಸ್ತ್ರ, ಆಭರಣ, ಚಪ್ಪಲ್ಲಿ ಅಂಗಡಿಗಳು ಹೀಗೆ ಹಬ್ಬದ ಖರೀದಿಗೆ ಅನುವಾಗುವ ಎಲ್ಲವನ್ನೂ ತೆರೆಯುವುದಕ್ಕೆ ಕೇರಳ ಸರ್ಕಾರ ಅವಕಾಶ ಕೊಟ್ಟಿದೆ. 

ಇದ್ಯಾವ ಬಗೆಯ ತುಷ್ಟೀಕರಣ? ಕುಂಭಮೇಳದಿಂದ ಎರಡನೇ ಅಲೆ ಹರಡಿತು ಎಂದೆಲ್ಲ ನಿರಾಧಾರವಾಗಿ ವಾದಿಸುವ ಒಂದು ವರ್ಗ ಇದರ ಬಗ್ಗೆ ಸುಮ್ಮನೇಕಿದೆ ಎಂಬ ಆಕ್ರೋಶದ ಚರ್ಚೆ ಈಗ ಸಾಮಾಜಿಕ ಮಾಧ್ಯಮದಲ್ಲಿ ತೆರೆದುಕೊಳ್ಳುತ್ತಿದೆ. 

ಕನ್ವರ್ ಯಾತ್ರಾದಲ್ಲಿ ಕಂಡ ವಿರೋಧಾಭಾಸ

ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಾಂಡವನ್ನು ಮುಖ್ಯವಾಗಿ ಒಳಗೊಂಡಂತೆ ಈ ಸಮಯದಲ್ಲಿ ಕನ್ವರ್ ಯಾತ್ರೆ ನಡೆಯುತ್ತದೆ. ಉತ್ತರ ಪ್ರದೇಶದ ಹಲವು ಶಿವಕ್ಷೇತ್ರಗಳಿಂದ ತೀರ್ಥ ತೆಗೆದುಕೊಂಡು ಹೋಗುವ ಜನಗುಂಪು ಹರಿದ್ವಾರದವರೆಗೆ ಯಾತ್ರೆಗೆ ಹೋಗುವುದು ಇದರ ತಿರುಳು. ಕೋವಿಡ್ ಕಾರಣದಿಂದ ಈ ಬಾರಿ ಇಲ್ಲಿ ಜನರನ್ನು ನಿಯಂತ್ರಿಸಿ, ಕೆಲವು ಮಾರ್ಗಸೂಚಿಗಳೊಂದಿಗೆ ಸಾಂಕೇತಿಕ ಆಚರಣೆಗೆ ಅವಕಾಶ ಕೊಡುವುದಕ್ಕೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿತ್ತು. ಆದರೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಾಲಯ ಇದನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದಿತು.

ಕನ್ವರ್ ಯಾತ್ರೆ ಸಾಗಬೇಕಿದ್ದ ಉತ್ತರ ಪ್ರದೇಶದಲ್ಲಿ ದಿನಕ್ಕೆ ಸರಾಸರಿ 200 ಪ್ರಕರಣಗಳಿವೆ, ಉತ್ತರಾಖಂಡದಲ್ಲಿ ದಿನಕ್ಕೆ ಸರಾಸರಿ 48 ಪ್ರಕರಣಗಳು ವರದಿಯಾಗುತ್ತವೆ. ಇಲ್ಲೆಲ್ಲ ಯಾವುದೇ ಆಚರಣೆ ಬೇಡ ಎಂದಾದರೆ ದಿನಕ್ಕೆ 13,000 ಪ್ರಕರಣಗಳಿರುವ ಕೇರಳದಲ್ಲಿ ಮಾತ್ರ ನಿರ್ದಿಷ್ಟ ಆಚರಣೆಗಳಿಗೆ ಏಕೆ ನಿಯಮಗಳ ಸಡಿಲಿಕೆ ಎಂಬ ಪ್ರಶ್ನೆ ಎದ್ದಿದೆ.

ಸಾವಿನ ದರದ ವಾದ

ಕೇರಳ ಸರ್ಕಾರದ ಪರವಾಗಿರುವವರು ಕೆಲವೊಮ್ಮೆ ಮಾಡುವ ವಾದವೆಂದರೆ- ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಿದ್ದರೂ ಸಾವಿನ ಸಂಖ್ಯೆ ಹೆಚ್ಚಿಲ್ಲವಾದ್ದರಿಂದ ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಈ ವಾದ ಅಪಾಯಕಾರಿ. ಏಕೆಂದರೆ ಸದ್ಯಕ್ಕೆ ಸಾವಿನ ದರ ಕಡಿಮೆಯೇ ಇದ್ದರೂ ಪ್ರಕರಣಗಳನ್ನು ಹತೋಟಿಗೆ ತರದಿದ್ದರೆ ವೈರಸ್ ಗೆ ರೂಪಾಂತರವನ್ನು ಹೊಂದುವುದಕ್ಕೆ ಸಮಯ ಕೊಟ್ಟಂತಾಗುತ್ತದೆ. ಆಗ ಮತ್ತೆ ಹೊಸ ಮಾದರಿಯ ಕೊರೋನಾ ವೈರಸ್ಸುಗಳು ಪ್ರತ್ಯಕ್ಷವಾಗಿ ಇಡೀ ದೇಶಕ್ಕೆ ಸಮಸ್ಯೆಯಾಗಿ ಪರಿಣಮಿಸಬಲ್ಲವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss