ಯಾವಾಗಲೂ ಒಂದೇ ರೀತಿ ರೈಸ್ ಬಾತ್ ತಿಂದು ಬೋರ್ ಆಗಿರುತ್ತದೆ. ಬೇರೆ ಏನಾದ್ರೂ ಮಾಡೋಣ ಎಂದರೆ ಏನ್ ಮಾಡೋದು ಗೊತ್ತಾಗಲ್ಲ ಅಲ್ವಾ? ನೀವು ಹಾಗಿದ್ರೆ ಕೆಸುವಿನ ಗಡ್ಡೆ ಬಾತ್ ರೆಸಿಪಿ ಟ್ರೈ ಮಾಡಿ.. ಹೇಗೆ ಈಸಿಯಾಗಿ ಮಾಡೋದು ಗೊತ್ತಾ?
ಬೇಕಾಗುವ ಸಾಮಗ್ರಿ:
ಕೆಸುವಿನ ಗಡ್ಡೆ
ಖಾರದ ಪುಡಿ
ಈರುಳ್ಳಿ
ಉಪ್ಪು
ಎಣ್ಣೆ
ಸಾಸಿವೆ
ಕರಿ ಬೇವಿನ ಸೊಪ್ಪು
ಕೊತ್ತಂಬರಿ ಸೊಪ್ಪು
ಅನ್ನ
ಮಾಡುವ ವಿಧಾನ:
ಮೊದಲಿಗೆ ಕೆಸುವಿನ ಗಡ್ಡೆಯನ್ನು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಚೆನ್ನಾಗಿ ಬೇಯದಿದ್ದರೆ ಬಾಯಿ ತೊರಿಕೆಯಾಗುತ್ತದೆ.
ನಂತರ ಅನ್ನವನ್ನು ಮಾಡಿಕೊಳ್ಳಿ.
ಆ ನಂತರ ಬಾಣಲೆಯನ್ನು ಬಿಸಿಗೆ ಇಟ್ಟು ಅದಕ್ಕೆ ಎಣ್ಣೆ , ಸಾಸಿವೆ, ಮೆಣಸಿನ ಪುಡಿ, ಹೆಚ್ಚಿದ ಈರುಳ್ಳಿ, ಕರಿಬೇವು, ಬೇಯಿಸಿದ ಆಲೂಗಡ್ಡೆಯ ಚಿಕ್ಕ ಚಿಕ್ಕ ಪೀಸ್ ಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
ಆಮೇಲೆ ಅದಕ್ಕೆ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ಲಿಂಬುರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಕೆಸುವಿನ ಗಡ್ಡೆ ಬಾತ್ ರೆಡಿ