ಉತ್ತರಾಖಂಡದ ಮಾಜಿ ಸಿಎಂ ಪುತ್ರಿಗೆ 4 ಕೋಟಿ ಪಂಗನಾಮ ಹಾಕಿದ ಖದೀಮರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದ ಮಾಜಿ ಸಿಎಂ ರಮೇಶ್ ಪೋಖ್ರಿಯಾಲ್ ನಿಶಾಂಕ್ ಪುತ್ರಿ ಆರುಷಿ ನಿಶಾಂಕ್‌ಗೆ ಮುಂಬೈ ಮೂಲದ ದಂಪತಿ 4 ಕೋಟಿ ರೂ. ವಂಚನೆ ಮಾಡಿದ್ದಾರೆ.

ಈ ಬಗ್ಗೆ ಆರುಷಿ ನಿಶಾಂಕ್ ಡೆಹ್ರಾಡೂನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಮುಂಬೈ ಮೂಲದ ಮಾನ್ಸಿ ಹಾಗೂ ವರುಣ್ ಬಾಂಗ್ಲಾ ದಂಪತಿ 4 ಕೋಟಿ ರೂ. ವಂಚಿಸಿದ್ದಾರೆ ಎಂದು ಆರುಷಿ ನಿಶಾಂಕ್ ಆರೋಪಿಸಿದ್ದಾರೆ. ತಮ್ಮ ನಿವಾಸಕ್ಕೆ ಬಂದು ಚಿತ್ರದಲ್ಲಿ ಪಾತ್ರ ನೀಡೋದಾಗಿ ಹೇಳಿ ಚಿತ್ರ ರಿಲೀಸ್ ಆದ್ಮೇಲೆ ಬಂದ ಲಾಭದಲ್ಲಿ 20% ಸೇರಿ 15 ಕೋಟಿ ರೂ. ಕೊಡೋದಾಗಿ ಭರವಸೆ ನೀಡಿದ್ದರು. ಬಳಿಕ ತನ್ನಿಂದ ಸಿನಿಮಾಗೆ 4 ಕೋಟಿ ರೂ. ಹೂಡಿಕೆ ಮಾಡಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!