ಹೊಸದಿಗಂತ ವರದಿ ಬೆಳಗಾವಿ:
ಹಾಡುಹಗಲೇ ಬಂಗಾರದ ಆಭರಣಗಳ ಅಂಗಡಿಗೆ ನುಗ್ಗಿದ ದರೋಡೆಕೋರರು ಕಳ್ಳತನಕ್ಕೆ ಯತ್ನಿಸಿದ ಘಟನೆ ಶಾಹುನಗರದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಶಾಹುನಗರದ ಪ್ರಶಾಂತ ಹೊನ್ನರಾವ ಎಂಬವರಿಗೆ ಸೇರಿದ ಅಂಗಡಿಯಲ್ಲಿಯೇ ಈ ದರೋಡೆ ಯತ್ನ ನಡೆದಿದೆ
ಬೆಳಿಗ್ಗೆ ಅಂಗಡಿ ತೆರೆದು ಎಲ್ಲ ಆಭರಣಗಳನ್ನು ಜೋಡಿಸುವ ಸಂದರ್ಭದಲ್ಲಿ ರಿವಾಲ್ವರ್ ನೊಂದಿಗೆ ಒಳನುಗ್ಗಿದ ಇಬ್ಬರು ಆಗುಂತಕರು ರಿವಾಲ್ವರ್ ತೋರಿಸಿ ದರೋಡೆಗೆ ಯತ್ನಿಸಿದಾಗ ಅಂಗಡಿಯಲ್ಲಿದ್ದ ಮಾಲೀಕರ ಸಂಬಂಧಿ ಸಂತೋಷ ಎಂಬವರು ಪ್ರತಿರೋಧ ವ್ಯಕ್ತಪಡಿಸಿದಾಗ ಅರೋಪಿಗಳು ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗಲಾಟೆ, ಚೀರಾಟ ಆಗುತ್ಯಿದ್ದಂತೆ ದುರುಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಗಾಯಾಳು ಸಂತೋಷ ಅವನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿಲಿದೆ. ಪೋಲೀಸ್ ಆಯುಕ್ತ ಸಿದ್ದರಾಮಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾವಳಿಗಳ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆ ಪೋಲೀಸರು ಜಾಲ ಬೀಸಿದ್ಧಾರೆ.