ಭಾರತದ ಖಾದಿಗೆ ಅಮೆರಿಕ ಜೀನ್ಸ್ ವಸ್ತ್ರ ತಯಾರಕರ ಮರುಬೇಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಖಾದಿ ಉದ್ಯಮ ಇದೀಗ ವಿಶ್ವದೆಲ್ಲೆಡೆ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದೆ. ಪಾಶ್ಚಾತ್ಯ ದೇಶಗಳ ಜನರೂ ಇತ್ತೀಚಿನ ದಿನಗಳಲ್ಲಿ ಖಾದಿ ವಸ್ತ್ರಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.
ಅಮೇರಿಕಾ ಮೂಲದ ಪ್ರಖ್ಯಾತ ಫ್ಯಾಶನ್ ಬ್ರಾಂಡ್ ಆದ ಪ್ಯಾಟಗೋನಿಯಾ ಸಂಸ್ಥೆಯು ಈ ಹಿಂದೆ 1.08 ಕೋಟಿ ಮೌಲ್ಯದ 30,000 ಮೀಟರ್ ಖಾದಿ ಡೆನಿಮ್ ಬಟ್ಟೆಯನ್ನು ಭಾರತದಿಂದ ಖರೀದಿಸಿ ಅಮೇರಿಕಾದಲ್ಲಿ ಮಾರಾಟ ಮಾಡಿತ್ತು. ಇದಕ್ಕೆ ಅಲ್ಲಿನ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಖಾದಿ ವಸ್ತ್ರಗಳನ್ನು ಪೂರೈಸುವಂತೆ ಭಾರತೀಯ ಖಾದಿ ವಸ್ತ್ರಗಳ ತಯಾರಿಕಾ ಸಂಸ್ಥೆಗೆ ಮರುಬೇಡಿಕೆ ಇಟ್ಟಿದೆ.
ಮತ್ತೆ 17,050 ಮೀಟರ್ ಖಾದಿ ಬಟ್ಟೆಯನ್ನು ಪೂರೈಸುವಂತೆ ಪ್ಯಾಟಗೋನಿಯಾ ಸಂಸ್ಥೆಯು ಗೊಂಡಲ್ ಮೂಲದ ಖಾದಿ ಸಂಸ್ಥೆಯಾದ ಉದ್ಯೋಗ ಭಾರತಿಗೆ ಮೊತ್ತೊಮ್ಮೆ ಆರ್ಡರ್‌ ಸಲ್ಲಿಸಿದೆ. ಈ ಬೇಡಿಕೆಯ ಮೌಲ್ಯ 80 ಲಕ್ಷ ರೂಪಾಯಿಗಳಷ್ಟಾಗುತ್ತದೆ.

 

ಈ ಕುರಿತು ಪ್ರತಿಕ್ರಿಯಿಸಿರುವ ಕೆವಿಐಸಿ (ಖಾದಿ ಇಂಡಿಯಾ) ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಭಾರತೀಯ ಖಾದಿ ಉದ್ಯಮದ ಯಶಸ್ಸನ್ನು ಶ್ಲಾಘಿಸಿದ್ದಾರೆ. ಇದು ಭಾರತೀಯ ಖಾದಿಯ ಜಾಗತಿಕ ಜನಪ್ರಿಯತೆ, ವಿಶ್ವ ದರ್ಜೆಯ ಗುಣಮಟ್ಟವನ್ನು ಸೂಚಿಸುತ್ತದೆ.
ಪ್ಯಾಟಗೋನಿಯಾ ಬ್ರಾಂಡ್‌ ಮತ್ತೊಮ್ಮೆ ಖಾದಿ ಬಟ್ಟೆಗಳಿಗೆ ಬೇಡಿಕೆ ಸಲ್ಲಿಸಿರುವುದು ಖಾದಿ ಉದ್ಯಮ ಗ್ಲೋಬಲ್ ಬ್ರಾಂಡ್ ಆಗುವತ್ತ ಸಾಗುತ್ತಿರುವುದರ ದ್ಯೋತಕವಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!