Saturday, July 2, 2022

Latest Posts

ಮೆಜೆಸ್ಟಿಕ್​ನಲ್ಲಿ ಬಸ್ಸು ಹತ್ತುವವರನ್ನೇ ಟಾರ್ಗೆಟ್​ ಮಾಡುತ್ತಿದ್ದ ಖದೀಮರ ಗ್ಯಾಂಗ್ ಈಗ ಅಂದರ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ರಾಜಧಾನಿಯ ಪ್ರಮುಖ ಬಸ್ ನಿಲ್ದಾಣ ಮೆಜೆಸ್ಟಿಕ್​ನಲ್ಲಿ ಬಸ್ಸು ಹತ್ತುವವರನ್ನೇ ಟಾರ್ಗೆಟ್​ ಮಾಡಿ ತಮ್ಮ ಕೈಚಳಕ ತೋರಿಸುತ್ತಿದ್ದ ಖದೀಮರ ಗ್ಯಾಂಗನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಚಂದ್ರೇಗೌಡ, ಮಂಜುಳಾ, ಜಮಾಲ್​, ಪ್ರಶಾಂತ್​, ಬಂಧಿತ ಆರೋಪಿಗಳು.
ಮೆಜೆಸ್ಟಿಕ್​ನಲ್ಲಿ ಬಸ್ಸ್​ಗಳು ರಷ್​ ಆಗಿದ್ದ ವೇಳೆ ತಾವೂ ಬಸ್​ ಹತ್ತುವ ನಾಟಕವಾಡಿ ಜನರ ಜೇಬಿನಲ್ಲಿದ್ದ ಪರ್ಸ್​, ಹಣ ಹಾಗೂ ಚಿನ್ನಾಭರಣಗಳನ್ನ ದೋಚುತ್ತಿದ್ದರು. ಉಪ್ಪಾರ ಪೇಟೆಯಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 4.60 ಲಕ್ಷ ರೂಪಾಯಿ ‌ಮೌಲ್ಯದ 90ಗ್ರಾಂ ಚಿನ್ನಾಭರಣ ಹಾಗೂ 60 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss