ಕಾಶ್ಮೀರದಲ್ಲಿ ವಿಷ್ಣುವಿನ ಚಿತ್ರಕ್ಕೆ ಪ್ರೀತಿಯಿಂದ ಮುತ್ತಿಟ್ಟ ಮುಸ್ಲಿಂ- ವಿಡಿಯೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಶ್ಮೀರದಲ್ಲಿರುವ ಖೀರ್‌ಭವಾನಿ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯೊಬ್ಬ ಭಗವಾನ್‌ ವಿಷ್ಣುವಿನ ಫೋಟೋಗೆ ಮುತ್ತಿಟ್ಟಿದ್ದಾನೆ. ಈ ಘಟನೆ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಆದಿತ್ಯ ರಾಜ್‌ ಎಂಬುವವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಇದನ್ನು ಪೋಸ್ಟ್‌ ಮಾಡಿದ್ದಾರೆ. ಇಂದು ಮುಂಜಾನೆ ಕಾಶ್ಮೀರದಲ್ಲಿ ಖೀರ್‌ಭವಾನಿ ದೇವಸ್ಥಾನಕ್ಕೆ ಭೇಟಿ ನೀಡದಾಗ ಅಲ್ಲಿ ಒಬ್ಬ ಮುಸ್ಲಿಂ, ಹಿಂದೂ ದೇವರಾದ ವಿಷ್ಣುವಿನ ಚಿತ್ರಕ್ಕೆ ಪ್ರೀತಿಯಿಂದ ಮುತ್ತಿಟ್ಟಿದ್ದಾನೆ.

ಈ ಹಿಂದೆಯೂ ನಾನು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ, ಆಗ ಇಬ್ಬರು ಮುಸ್ಲಿಂ ಮಹಿಳೆಯರು ದೇವಸ್ಥಾನದ ಒಳಗೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನ ನೋಡಿದ ನನಗೆ ನಿಜಕ್ಕೂ ಆಶ್ಚರ್ಯವಾಯಿತು ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!