ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಖೇಲೋ ಇಂಡಿಯಾ ಯೂತ್ ಗೇಮ್ಸ್ ಆರಂಭವಾಗಲಿದ್ದು, ಮಧ್ಯಪ್ರದೇಶದ ಭೋಪಾಲ್ನಲ್ಲಿ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ.
ಇಂದೋರ್, ಗ್ವಾಲಿಯರ್, ದೆಹಲಿ ಸೇರಿದಂತೆ ಎಂಟು ನಗರಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಕರ್ನಾಟಕದಿಂದ ಒಟ್ಟಾರೆ 244 ಮಂದಿ ಪಾಲ್ಗೊಳ್ಳಲಿದ್ದಾರೆ.
ಇಂದು ಆರಂಭವಾಗುವ ಗೇಮ್ಸ್ ಫೆ.11ರಂದು ಮುಕ್ತಾಯಗೊಳ್ಳಲಿದೆ. ದೇಶದೆಲ್ಲೆಡೆಯಿಂದ ಆರು ಸಾವಿರಕ್ಕು ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.