Thursday, March 30, 2023

Latest Posts

CINE NEWS | ಗುಡ್‌ನ್ಯೂಸ್ ಕೊಟ್ಟ ಕಿಯಾರಾ-ಸಿದ್ಧಾರ್ಥ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಜೋಡಿ ಸಿದ್ಧಾರ್ಥ್ ಕಿಯಾರಾ ಈಗಿನ್ನೂ ರಿಸೆಪ್ಷನ್ ಮುಗಿಸಿ ತಮ್ಮ ಕರ್ತವ್ಯಕ್ಕೆ ವಾಪಾಸಾಗಿದ್ದಾರೆ.

ಈ ಮಧ್ಯೆ ಗುಡ್‌ನ್ಯೂಸ್ ಒಂದನ್ನು ಜೋಡಿ ನೀಡಿದೆ, ಶೇರ್ ಶಾ ಜೋಡಿ ಅಭಿಮಾನಿಗಳಿಗೆ ಮತ್ತೆ ಇವರಿಬ್ಬರನ್ನು ಆನ್‌ಸ್ಕ್ರೀನ್ ನೋಡುವ ಭಾಗ್ಯ ಸಿಗಲಿದೆ. ಹೊಸ ಸಿನಿಮಾದಲ್ಲಿ ಇಬ್ಬರೂ ನಟಿಸುತ್ತಿದ್ದು, ಕರಣ್ ಜೋಹರ್ ಇದಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ.

ಸಿದ್ಧಾರ್ಥ್‌ರನ್ನು ಕರಣ್ ಲಾಂಚ್ ಮಾಡಿದ್ದರು, ಇನ್ನು ಕಿಯಾರಾ ಅಭಿನಯದ ಲಸ್ಟ್ ಸ್ಟೋರೀಸ್‌ಗೂ ಕರಣ್ ಬಂಡವಾಳ ಹಾಕಿದ್ದರು. ಹೀಗಾಗಿ ಇವರ ಮಧ್ಯೆಯೂ ಉತ್ತಮ ಫ್ರೆಂಡ್‌ಶಿಪ್ ಇದೆ ಎನ್ನಲಾಗಿದೆ. ಸದ್ಯದಲ್ಲೇ ಸಿನಿಮಾ ಅನೌನ್ಸ್ ಆಗಲಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!