Friday, August 19, 2022

Latest Posts

ಹಣ ನೀಡದಕ್ಕೆ ಅಪಹರಿಸಿದ ಬಾಲಕನ ಕೊಂದ ಆರೋಪಿ ಬಂಧನ

ಹೊಸ ದಿಗಂತ ವರದಿ, ಮೈಸೂರು:

ದೀಪಾವಳಿ ಹಬ್ಬಕ್ಕೆ ಪಟಾಕಿ ತರಲು ಅಂಗಡಿಗೆoದು ಹೋಗಿದ್ದ ಬಾಲಕನೊಬ್ಬನನ್ನು ಕಿಡ್ನಾಪ್ ಮಾಡಿ, ಆತನನ್ನು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡಿನ ನಿವಾಸಿಯಾದ ತರಕಾರಿ ಹೋಲ್ ಸೆಲ್ ಉದ್ಯಮಿ ನಾಗರಾಜ್ ಎಂಬುವರ. ಕಾರ್ತಿಕ್(10) ಅಪಹರಣಕ್ಕೆ ಒಳಗಾಗಿ, ಹತ್ಯೆಗೀಡಾದ ಬಾಲಕ. ಹುಣಸೂರಿನ ದಾಸನಪುರ ನಿವಾಸಿ ಜವರಯ್ಯ ಬಂಧಿತ ಆರೋಪಿ.
ಕಾರ್ತಿಕ್ ಬುಧವಾರ ರಾತ್ರಿ 7.30ರ ವೇಳೆ ಪಟಾಕಿ ತರಲು ಅಂಗಡಿಗೆ ಹೋಗಿದ್ದನು. ಈ ವೇಳೆ ಆತನನ್ನು ದುಷ್ಕರ್ಮಿ ಹೊತ್ತೊಯ್ದಿದ್ದನು. ಬಳಿಕ ಬಾಲಕನ ತಂದೆಗೆ ದೂರವಾಣಿ ಕರೆ ಮಾಡಿ 4 ಲಕ್ಷ ರೂ. ತರುವಂತೆ ಬೇಡಿಕೆ ಇಟ್ಟಿದ್ದನು.
ಈ ಕುರಿತು ಬಾಲಕನ ಕುಟುಂಬಸ್ಥರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ರಾತ್ರಿಯಿಂದಲೇ ತನಿಖೆ ಶುರು ಮಾಡಿದ್ದರು. ಖುದ್ದು ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು.
ಆದರೆ ಹಣ ನೀಡದ ಹಿನ್ನೆಲೆಯಲ್ಲಿ ಬಾಲಕ ಕಾರ್ತಿಕ್ ನನ್ನ ಆರೋಪಿ ಜವರಯ್ಯ ಕೊಲೆ ಮಾಡಿದ್ದಾನೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರಿಂದ ಕೊಲೆ ಆರೋಪಿಯನ್ನ ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!