ಅಪಹರಣಕ್ಕೊಳಗಾಗಿದ್ದ ಬಾಲಕಿ 17 ವರ್ಷಗಳ ಬಳಿಕ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಅಪಹರಣಕ್ಕೊಳಗಾಗಿದ್ದ ಮಹಿಳೆಯೊಬ್ಬರು 17 ವರ್ಷಗಳ ಬಳಿಕ ಪತ್ತೆಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿಯ ಗೋಕಲ್ಪುರಿಯಲ್ಲಿ ಮಹಿಳೆ ಪತ್ತೆಯಾಗಿದ್ದು, ಅವರ ವಯಸ್ಸು 32.

ಡಿಸಿಪಿ ಶಹದಾರ ರೋಹಿತ್ ಮೀನಾ ಅವರ ಪ್ರಕಾರ, ಮೇ 22 ರಂದು ಸೀಮಾಪುರಿ ಪೊಲೀಸ್ ಠಾಣೆಯ ತಂಡವು ರಹಸ್ಯ ಮಾಹಿತಿಯ ಮೇರೆಗೆ 17 ವರ್ಷಗಳ ಹಿಂದೆ ಅಪಹರಣಕ್ಕೊಳಗಾದ ಮಹಿಳೆಯನ್ನು ಪತ್ತೆ ಹಚ್ಚಲಾಗಿದೆ.

ಮಹಿಳೆಯ ಪೋಷಕರ ದೂರಿನ ಮೇರೆಗೆ ದೆಹಲಿಯ ಗೋಕುಲಪುರಿ ಪೊಲೀಸ್ ಠಾಣೆಯಲ್ಲಿ 2006 ರಲ್ಲಿ ಐಪಿಸಿ ಸೆಕ್ಷನ್ 363ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2006ರಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು ಮತ್ತು ತನಿಖೆಯ ಸಮಯದಲ್ಲಿ, ಹುಡುಗಿ ತನ್ನ ಮನೆಯಿಂದ ಹೊರಬಂದ ನಂತರ ಉತ್ತರ ಪ್ರದೇಶದ ಚೆರ್ದಿಹ್ ಜಿಲ್ಲೆಯ ಬಲಿಯಾ ಗ್ರಾಮದಲ್ಲಿ ದೀಪಕ್ ಎಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು ಎಂದು ಹೇಳಿದ್ದಾಳೆ.

ಡಿಸಿಪಿ ಶಹದಾರ ರೋಹಿತ್ ಮೀನಾ ಪ್ರಕಾರ, 2023 ರಲ್ಲಿ ಇಲ್ಲಿಯವರೆಗೆ ಶಹದಾರ ಜಿಲ್ಲೆಯಲ್ಲಿ 116 ಅಪಹರಣಗೊಂಡ ಮಕ್ಕಳು/ವ್ಯಕ್ತಿಗಳು ಮತ್ತು ನಾಪತ್ತೆಯಾದ 301 ಮಂದಿಯನ್ನು ಪತ್ತೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!