SHOCKING | ಮಹಿಳೆ ಮೇಲೆ ಅತ್ಯಾಚಾರವೆಸಗಿ ಮಾನವ ಮಾಂಸ ತಿನ್ನಲು ಹಿಂಸಿಸಿದ ನರ ರೂಪದ ರಾಕ್ಷಸರು

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಮಾನವ ಕುಲ ಬೆಚ್ಚಿ ಬೀಳುವಂತ ವಿಕೃತ ಘಟನೆಯೊಂದು ನಡೆದಿದೆ. ಕಾಂಗೋ ಮಹಿಳೆಯೊಬ್ಬಳನ್ನು ಉಗ್ರಗಾಮಿಗಳು ಎರಡು ಬಾರಿ ಅಪಹರಿಸಿದ್ದಾರೆ. ಆಕೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ. ಮತ್ತು ಮಾನವ ಮಾಂಸವನ್ನು ಬೇಯಿಸಿ ತಿನ್ನಿಸಿದ್ದಾರೆ ಎಂಬ ಸಂಗತಿಯನ್ನು ಖುದ್ದು ಸಂತ್ರಸ್ತೆ ಕಾಂಗೋದಾ ಮಾನವ ಹಕ್ಕುಗಳ ಸಂಸ್ಥೆಯೆದುರು ಬಿಚ್ಚಿಟ್ಟಿದ್ದಾಳೆ.
ಕಾಂಗೋದ ಮಹಿಳಾ ಹಕ್ಕುಗಳ ಗುಂಪಿನ (SOFEPADI) ಅಧ್ಯಕ್ಷೆ ಜೂಲಿಯೆನ್ ಲುಸೆಂಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಂಗೋದ ಪೂರ್ವ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷದ ಭೀಕರತೆಯನ್ನು ವಿವರಿಸುವಾಗ ಮಹಿಳೆ ಅನುಭವಿಸಿದ ಮಾನಸಿಕ ಯಾತನೆಯ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಾಂಗೋದಲ್ಲಿ ಮೇ ಅಂತ್ಯದಿಂದ ಸರ್ಕಾರ ಮತ್ತು ಬಂಡುಕೋರ ಗುಂಪುಗಳ ನಡುವೆ ನಡೆಯುತ್ತಿರುವ ಭಾರೀ ಹೋರಾಟದಲ್ಲಿ  ಹಿಂಸಾಚಾರವು ಮೇರೆಮೀರಿ ಹೋಗಿದೆ. ಕೊಡೆಕೋ ಅಪಹರಣಕ್ಕೊಳಗಾದ ತನ್ನ ಕುಟುಂಬದ ಸದಸ್ಯನೊಬ್ಬನನ್ನು ಬಿಡಿಸಿಕೊಳ್ಳಲು ಸುಲಿಗೆ ಹಣ ಪಾವತಿಸಲು ಹೋದಾಗ ಉಗ್ರಗಾಮಿಗಳು ಮಹಿಳೆಯನ್ನು ಅಪಹರಿಸಿದರು. ಅಲ್ಲಿದ್ದ ನರರೂಪದ ರಾಕ್ಷಸರು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುತ್ತಿದ್ದರು. ಇದೇ ಸಂದರ್ಭದಲ್ಲಿ ಉಗ್ರರು ಒಬ್ಬ ವ್ಯಕ್ತಿಯನ್ನು ಎಲೆದು ತಂದು ಆತನ ಕತ್ತು ಸೀಳಿದರು.
ಆನಂತರ ಏನೂ ನಡೆದೇ ಇಲ್ಲವೆಂಬಂತೆ ಅವರು ಆತನ ಕರುಳನ್ನು ಹೊರತೆಗೆದರು ಮತ್ತು ಅವುಗಳನ್ನು ಬೇಯಿಸಲು ಮಹಿಳೆಗೆ  ಸೂಚಿಸಿದರು. ಉಳಿದ ಊಟವನ್ನು ತಯಾರಿಸಲು ಅವರು ಎರಡು ನೀರಿನ ಪಾತ್ರೆಗಳನ್ನು ತಂದರು. ನಂತರ ಅವರು ಎಲ್ಲಾ ಕೈದಿಗಳಿಗೆ ಮಾನವ ಮಾಂಸವನ್ನು ತಿನ್ನಿಸಿದರು,” ಎಂದು ಲುಸೆಂಜ್ ಮಹಿಳೆಯ ಕಥೆಯನ್ನು ಭದ್ರತಾ ಮಂಡಳಿಗೆ  ವಿವರಿಸಿದರು.
ಕೆಲವು ದಿನಗಳ ನಂತರ ಮಹಿಳೆಯನ್ನು ಬಿಡುಗಡೆ ಮಾಡಲಾಯಿತು, ಆದರೆ ಆಕೆ ಮನೆಗೆ ಮರಳಲು ಪ್ರಯತ್ನಿಸುತ್ತಿರುವಾಗಲೇ ಮತ್ತೊಂದು ಮಿಲಿಟರಿ ಗುಂಪು ಆಕೆಯನ್ನು ಅಪಹರಿಸಿತು ಮತ್ತು ಆ ಗುಂಪಿನ ಸದಸ್ಯರು ಪದೇ ಪದೇ ಅತ್ಯಾಚಾರ ಮಾಡಿದರು. ಅಲ್ಲಿ ಮಹಿಳೆಗೆ ಮತ್ತೊಮ್ಮೆ ನರಕ ದರ್ಶನವಾಯಿತು. ಮತ್ತೊಮ್ಮೆ ಮಾನವ ಮಾಂಸವನ್ನು ಬೇಯಿಸಿ ತಿನ್ನಲು ಹೇಳಯಿತು” ಎಂದು ಮಹಿಳೆ ಹೇಳಿದಳು ಎಂದು ಹೇಳಿದ್ದಾರೆ.
ಅಂತಿಮವಾಗಿ ಮಹಳೆ ಬಹಳಷ್ಟು ಕಷ್ಟಪಟ್ಟ ಉಗ್ರಗಾಮಿಗಳ ಕಣ್ತಪ್ಪಿಸಿ  ತಪ್ಪಿಸಿಕೊಂಡಿದ್ದಾಳೆ. ಕಾಂಗೋದ ಖನಿಜ-ಸಮೃದ್ಧ ಪೂರ್ವಭಾಗದ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಹಕ್ಕು ಸಾಧಿಸಲು ಹಲವಾರು ಸಶಸ್ತ್ರ ಸೇನಾಪಡೆಗಳು ದೀರ್ಘಕಾಲದಿಂದ ಹೋರಾಡುತ್ತಿವೆ. ಅಂತಹ ಉಗ್ರ ಗುಂಪುಗಳಲ್ಲಿ ಕೊಡೆಕೋ ಒಂದಾಗಿದೆ – ಇದು ಕಳೆದ ದಶಕದಲ್ಲಿ ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಉಗ್ರರ ದಮನಕ್ಕೆ ಕಳೆ 20 ವರ್ಷಗಳಿಂದ  ಯುಎನ್ ಶಾಂತಿಪಾಲಕರ ಪಡೆ ಕಾಂಗೋದಲ್ಲಿ ನಿಯೋಜನೆಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!