ಹೊಸದಿಗಂತ ವರದಿ, ಮಂಡ್ಯ:
ಜಲಕ್ರೀಡೆಯಾಡುವ ಶ್ವಾನ, ದಡದಲ್ಲಿ ನಿಂತು ಶ್ವಾನವನ್ನು ಆಟವಾಡಿಸುವ ಚಿಣ್ಣರು. ಈ ದೃಶ್ಯ ಕಂಡು ಕಣ್ಣರಳಿಸಿ ಆನಂದಿಸುವ ಗ್ರಾಮಸ್ಥರು. ಇದು ನಿತ್ಯ ನಡೆಯುವ ಶ್ವಾನ ನೀರಿನ ಆಟ.
ನಾಯಿ ಹಾವಳಿಯಿಂದ ಬೇಸತ್ತ ಜನರು ನಾಯಿ ಕಂಡು ಬೆಚ್ಚಿ ಬಿದ್ದು ದೂರ ಸರಿಯುವುದು ಒಂದು ಕಡೆಯಾದರೆ, ನಾಯಿಗಳಿಗೆ ಬುದ್ಧಿ ಕಲಿಸಿ ಅವುಗಳಿಂದಲೇ ಕೆಲಸ ಮಾಡಿಸುವ ಚಾಣಕ್ಷತೆ ಮತ್ತೊಂದು ಕಡೆ. ಇವರೆಡರ ನಡುವೆ ನೀರಿನಲ್ಲಿ ನಿತ್ಯ ಈಜುವ ಶ್ವಾನ. ಇದು ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿ ಕಂಡುಬರುವ ದೃಶ್ಯ.
ಜಿ. ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಧಾನ ನಿರ್ವಾಹಕ ಸುನಿಲ್ ಅವರು ಸಾಕಿರುವ ನಾಯಿಯನ್ನು ತಮ್ಮ ಕಾರಿನಲ್ಲಿ ಗ್ರಾಮದ ಸಮೀಪದಲ್ಲಿರುವ ಹೆಬ್ಬಳಕ್ಕೆ ಕರೆತರುತ್ತಾರೆ. ಕಾರಿನಿಂದ ಇಳಿದ ಶ್ವಾನ ಹೆಬ್ಬಳಕ್ಕೆ ಇಳಿದು ನೀರಿನಲ್ಲಿ ಜಲಕ್ರೀಡೆಯಾಡುತ್ತಾ ಸಂಭ್ರಮಿಸುತ್ತೆ. ಈ ದೃಶ್ಯವನ್ನು ಗ್ರಾಮಸ್ಥರು ನಿಂತು ನೋಡುತ್ತಾ ಆನಂದಿಸುತ್ತಾರೆ.
ಚಿಣ್ಣರು ಸಹ ದಡದಲ್ಲಿ ನಿಂತು ನಾಯಿಗೆ ತಮ್ಮ ಬಳಿ ಇದ್ದ ಬಾಲ್ಗಳನ್ನು ನೀರಿನಲ್ಲಿ ಎಸೆಯುವುದು, ನಾಯಿ ನೀರಿಗೆ ಬಿದ್ದ ಬಾಲ್ನ್ನು ಎತ್ತಿ ಮತ್ತೆ ಚಿಣ್ಣರತ್ತ ತಂದುಕೊಡುವಂತಹ ಆಟವಾಡುತ್ತಾ ಸುಮಾರು ಅರ್ಧ ತಾಸು ಜಲಕ್ರೀಡೆಯಾಡುತ್ತದೆ.
ಅರ್ಧ ಗಂಟೆಯ ನಂತರ ಮಾಲೀಕ ನಾಯಿಯ ಹೆಸರಿಡು ಕೂಗಿ ಕರೆದಾಗ ತಕ್ಷಣ ನೀರಿನಿಂದ ಮೇಲೆ ಬಂದು ನಿಲ್ಲುತ್ತೆ. ಟವಲ್ನಿಂದ ನಾಯಿಯ ಮೈಯನ್ನು ಒರೆಸಿದ ಸ್ವಲ್ಪ ಸಮಯದ ನಂತರ ಕಾರು ಹತ್ತಿ ಮನೆಗೆ ಕಡೆಗೆ ತೆರಳುತ್ತೆ. ನಾಯಿ ಜಲಕ್ರೀಡೆಯಾಡಲು ಬರುವುದನ್ನು ಗ್ರಾಮದ ಕೆಲ ಚಿಣ್ಣರು ಕಾಯುವಂತಹ ಸ್ಥಿಯೂ ನಿರ್ಮಾಣವಾಗಿದೆ. ಒಟ್ಟಾರೆ ಶ್ವಾನ ಜಲಕ್ರೀಡೆಯೊಂದಿಗೆ ಉತ್ತಮ ಮನರಂಜನೆ ನೀಡುತ್ತದೆ