IPLಗೆ ವಿದಾಯ ಹೇಳಿದ ಕಿರನ್‌ ಪೋಲಾರ್ಡ್ ಗೆ ಸಿಕ್ಕಿತು ಮಹತ್ವದ ಜವಾಬ್ದಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL) ಗೆ ವಿದಾಯ ಹೇಳಿದ ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಂಡರ್‌ ಕಿರನ್‌ ಪೋಲಾರ್ಡ್ ಅವರಿಗೆ ತಂಡದ ಒಡತಿ ನೀತಾ ಅಂಬಾನಿ ಮಹತ್ವದ ಹುದ್ದೆ ನೀಡಿದ್ದಾರೆ.

2010 ರಿಂದ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಪೋಲಾರ್ಡ್‌ ಇನ್ನು ಮುಂದೆ ಬ್ಯಾಟಿಂಗ್‌ ಕೋಚ್‌ ಆಗಿ ಮುಂದುವರಿಯಲಿದ್ದಾರೆ.
ಪೋಲಾರ್ಡ್‌ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ದರಾಗಿದ್ದರು.ಮುಂಬೈ ತಂಡದ ಆಧಾರಸ್ತಂಭವಾಗಿ ಅನೇಕ ಪಂದ್ಯದಲ್ಲಿ ಫಲಿತಾಂಶವನ್ನೇ ಬದಲಾಯಿಸುತ್ತಿದ್ದರು.

ಆದರೆ ಇಂದು ಮುಂಬೈ ಇಂಡಿಯನ್ಸ್‌ ತಂಡದ ಜೊತೆಗಿನ ಚರ್ಚೆಯ ಬಳಿಕ ನಾನು ಐಪಿಎಲ್‌ ಬದುಕಿಗೆ ನಿವೃತ್ತಿ ಹೇಳುತ್ತಿದ್ದೇನೆ ಮಾಹಿತಿ ನೀಡಿದ್ದರು.

ಇದೀಗ ನೀತಾ ಅಂಬಾನಿ, ಐಪಿಎಲ್‌ ಮೂರನೇ ಆವೃತ್ತಿಯಿಂದ ನಾವು ಪೊಲಾರ್ಡ್‌ ಸಂತೋಷ, ಬೆವರು ಮತ್ತು ಕಣ್ಣೀರನ್ನು ಹಂಚಿಕೊಂಡಿದ್ದೇವೆ. ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನಮ್ಮ ಚಾಂಪಿಯನ್ಸ್ ಲೀಗ್ ಟ್ರೋಫಿ ಮತ್ತು ಎಲ್ಲಾ 5 ಐಪಿಎಲ್‌ ವಿಜೇತ ತಂಡದ ಭಾಗವಾಗಿದ್ದಾರೆ. ಮೈದಾನದಲ್ಲಿ ಅವರ ಮ್ಯಾಜಿಕ್ ನೋಡುವುದನ್ನು ನಾವು ತಪ್ಪಿಸಿಕೊಳ್ಳುತ್ತೇವೆ. ಆದರೆ ಅವರು ಎಂಐ ತಂಡಕ್ಕೆ ಆಡುವುದನ್ನು ಮುಂದುವರಿಸುತ್ತಾರೆ. ಬ್ಯಾಟಿಂಗ್ ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಪೋಲಾರ್ಡ್‌ ಅವರ ಹೊಸ ಪ್ರಯಾಣವು ಅವರಿಗೆ ಇನ್ನೂ ಹೆಚ್ಚಿನ ವೈಭವ, ವಿಜಯ ತರಲಿ ಎಂದು ಶುಭ ಹಾರೈಸಿದ್ದಾರೆ.
ಈ ಮೂಲಕ ತಂಡದ ಭಾಗವಾಗಿ ಅವರು ಮುಂದುವರಿಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!