ಅಲ್‌ ಖೈದಾ ಮುಖ್ಯಸ್ಥನ ಹತ್ಯೆ: ದೋಹಾ ಒಪ್ಪಂದದ ಉಲ್ಲಂಘನೆಯೆಂದ ತಾಲೀಬಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಲ್‌ ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹತ್ಯೆಯ ಕುರಿತು ಅಪ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲೀಬಾನ್‌ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಅಮೆರಿಕದ ಈ ಕ್ರಮವು ಇಸ್ಲಾಮಿಕ್‌ ಆಡಳಿತಗುಂಪಾದ ತಾಲೀಬಾನ್‌ ಹಾಗೂ ಅಮೆರಿಕದ ನಡುವಿನ ದೋಹಾ ಒಪ್ಪಂದದ ಉಲ್ಲಂಘನೆ ಎಂದು ಹೇಳಿದೆ.

“ಇಸ್ಲಾಮಿಕ್ ಎಮಿರೇಟ್ (ಅಫ್ಘಾನಿಸ್ತಾನದ) ಈ ದಾಳಿಯನ್ನು ಸಾಧ್ಯವಾದಷ್ಟು ಪ್ರಬಲ ಪದಗಳಲ್ಲಿ ಖಂಡಿಸುತ್ತದೆ ಮತ್ತು ಇದು ಅಂತರರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸುತ್ತದೆ” ಎಂದು ಆಡಳಿತದ ವಕ್ತಾರರು ಪಾಷ್ಟೋದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ, ಇಸ್ಲಾಮಿಸ್ಟ್ ನೇತೃತ್ವದ ಆಡಳಿತದ ಅಡಿಯಲ್ಲಿ ಅಫ್ಘಾನಿಸ್ತಾನದ ಮಾಹಿತಿ ಮತ್ತು ಸಂಸ್ಕೃತಿಯ ಉಪ ಮಂತ್ರಿ ಮುಜಾಹಿದ್, ಅಫ್ಘಾನ್ ನೆಲದಲ್ಲಿ ಇದೇ ರೀತಿಯ ಯಾವುದೇ ಭವಿಷ್ಯದ ಕಾರ್ಯಾಚರಣೆಯ ಬಗ್ಗೆ ವಾಷಿಂಗ್ಟನ್‌ಗೆ ಎಚ್ಚರಿಕೆಯ ಸಂದೇಶವನ್ನೂ ಕೂಡ ರವಾನಿಸಿದ್ದು “ಈ ಕ್ರಮವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಅಫ್ಘಾನಿಸ್ತಾನದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಭವಿಷ್ಯದ ಯಾವುದೇ ಪುನರಾವರ್ತನೆಯು ಅಸ್ತಿತ್ವದಲ್ಲಿರುವ ಅವಕಾಶಗಳಿಗೆ ಹಾನಿಯಾಗಬಹುದು, ”ಎಂದು ಉಲ್ಲೇಖಿಸಿದ್ದಾರೆ.

ಮೇ 2011 ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ US ನೇವಿ ಸೀಲ್ಸ್‌ ಗಳು ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುಹಾಕಿದ್ದರು. ಲಾಡೆನ್‌ ನಂತರ 71 ವರ್ಷದ ಈಜಿಪ್ಟ್ ಪ್ರಜೆ, ಜವಾಹಿರಿ ಅಲ್‌ ಖೈದಾದ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. ಆತನನ್ನು ಅಮೆರಿಕವು ಡ್ರೋನ್‌ ಕಾರ್ಯಾಚರಣೆಯ ಮೂಲಕ ಹೊಡೆದು ಹಾಕಿತ್ತು. ಇದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಸೋಮವಾರ ಸಂಜೆ ಶ್ವೇತಭವನದಿಂದ ರಾಷ್ಟ್ರೀಯ ಭಾಷಣದಲ್ಲಿ ದೃಢಪಡಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!