ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಿಮ್ಸ್ ವೈದ್ಯರ ವೈದ್ಯರ ನಡೆಯ ಪ್ರಕರಣವನ್ನು ಸರ್ಕಾರ ಗಂಭೀರ ಪರಿಗಣಿಸಿದ್ದು, ಇಂದು ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ನೇತೃತ್ವದ ತನಿಖಾ ತಂಡ ಹುಬ್ಬಳ್ಳಿಗೆ ಆಗಮಿಸಿದೆ.
ಡಾ. ಗಿರೀಶ ಮತ್ತು ಡಾ. ಮಹೇಶ ಇವರ ತಂಡ ಕಿಮ್ಸ್ ಆಸ್ಪತ್ರೆಗೆ ಬಂದು ನಿರ್ದೇಶಕ ರಾಮಲಿಂಗಪ್ಪ, ಸಿಇಒ ರಾಜೇಶ್ವರಿ ಜೈನಾಪುರ ಸೇರಿದಂತೆ ಎಲ್ಲರ ಜತೆ ಚರ್ಚೆ ನಡೆಸಿದ್ದು, 11 ವೈದ್ಯರನ್ನು ವಿಚಾರಣೆ ಮಾಡಲಿದ್ದಾರೆನ್ನಲಾಗಿದೆ.
ಕೆಲಸಗಳ್ಳ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಈಗಾಗಲೇ ಆರೋಗ್ಯ ಸಚಿವ ಕೆ. ಸುಧಾಕರ ಹೇಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯನ್ನು ತಿರಸ್ಕರಿಸಿಸಲಾಗಿದೆ ಎಂದು ತಿಳಿದು ಬಂದಿದೆ.
ಹನ್ನೊಂದು ವೈದ್ಯರ ಹಾಜರಾತಿ ಅವರ ಕಾರ್ಯ ವಿವರ, ಅಲ್ಲದೇ ಶಸ್ತ್ರಚಿಕಿತ್ಸೆ ಎಲ್ಲವನ್ನೂ ವಿವರವಾಗಿ ನೀಡುವಂತೆ ಕಿಮ್ಸ್ ನಿರ್ದೇಶಕರಿಗೆ ತಿಳಿಸಿದ್ದಾರೆನ್ನಲಾಗಿದೆ.
ಇಂದು ಬಂದ ತನಿಖಾತಂಡ ಮೊದಲು ಮಾಡಬೇಕಾಗಿದ್ದು ಕೆಲಸಗಳ್ಳ ವೈದ್ಯರ ವಿಚಾರಣೆಯಾಗಿದ್ದು ಅದನ್ನು ಬಿಟ್ಟು ಕುಟುಕು ಕಾರ್ಯಾಚರಣೆ ಹೇಗೆ ನಡೆಯಿತು, ಅವರು ಹೇಗೆ ಒಳ ಬಂದರು, ಭದ್ರತಾ ಲೋಪವಾಗಿದೆಯೇ ಮುಂದಾದವುಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ತಂತ್ರವೇ ಎನ್ನಲಾಗುತ್ತಿದೆ.
11 ವೈದ್ಯರ ಪೈಕಿ ಕೆಲವರ ಮೇಲೆ ಮಾತ್ರ ಕ್ರಮ ಕೈಗೊಂಡು ಮೂರನಾಲ್ಕು ವೈದ್ಯರ ರಕ್ಷಣೆಗೆ ರಾಜ್ಯ ಕೆಲ ಸಚಿವರಿಙದಲೇ ಒತ್ತಡ ಬರಲಾರಂಭಿಸಿದ್ದು, ಅಂತಹ ಯತ್ನ ನಡೆದಿದೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಕಿಮ್ಸ್ ನಲ್ಲಿನ ಕೆಲ ಆಯಕಟ್ಟಿನ ಅಧಿಕಾರಿಗಳೇ ತಮಗಾಗದ ವೈದ್ಯರ ವಿರುದ್ಧ ಕಾರ್ಯಾಚರಣೆಗೆ ಸಹಕರಿಸಿದ್ದಾರೆ ಎಂಬ ಮಾತೂ ಕೇಳಿಬರಲಾರಂಭಿಸಿದೆ. ಕಿಮ್ಸ್ ಆಗಮಿಸಿದ ತಂಡ ಸಿಇಒ ಅವರನ್ನು ನೇರವಾಗಿ ತರಾಟೆ ತೆಗೆದುಕೊಂಡಿದ್ದು ನೀವು ಸರಿಯಾಗಿ ಎಲ್ಲವನ್ನೂ ಪರಿಶೀಲಿಸಬೇಕಿತ್ತು ಎಂದು ಹೇಳದೆಯೆನ್ನಲಾಗಿದೆ.