ಮೇ 6ಕ್ಕೆ ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜ ಚಾರ್ಲ್ಸ್ III ರ ಪಟ್ಟಾಭಿಷೇಕವು ಮುಂದಿನ ವರ್ಷದ ಮೇ 6 ರಂದು ನಡೆಯಲಿದೆ ಎಂದು ಬಕಿಂಗ್ಹ್ಯಾಮ್ ಅರಮನೆ ಪ್ರಕಟಿಸಿದೆ. ಪಟ್ಟಾಭಿಷೇಕ ಕಾರ್ಯಕ್ರಮವು ರಾಜಪ್ರಭುತ್ವದ ಐತಿಹಾಸಿಕ ಸಂಪ್ರದಾಯಗಳು ಮತ್ತು ಅದರ ಆಧುನಿಕತೆಯನ್ನು ಪ್ರತಿಬಿಂಬಿಸುವಂತಿರಲಿದೆ.
73 ವರ್ಷದ ಚಾರ್ಲ್ಸ್ ಅವರು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. 900 ವರ್ಷಗಳ ಹಿಂದಿನ ಸುದೀರ್ಘ ಸಂಪ್ರದಾಯವನ್ನು ಅನುಸರಿಸುತ್ತಾರೆ. ರಾಜನ ಪತ್ನಿ ಹಾಗೂ ಕ್ವಿಸ್‌ ಆಫ್ ಕಾನ್ಸಾರ್ಟ್ ಕ್ಯಾಮಿಲ್ಲಾ (75) ಕೂಡ ಕಿರೀಟಧಾರಣೆ ಮಾಡಲಿದ್ದಾರೆ ಎಂದು ಅರಮನೆ ದೃಢಪಡಿಸಿದೆ.
ಮೇ 6 ಚಾರ್ಲ್ಸ್ ಅವರ ಮೊಮ್ಮಗ, ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಅವರ ಪುತ್ರ ಆರ್ಚಿಯ ನಾಲ್ಕನೇ ಹುಟ್ಟುಹಬ್ಬವಾಗಿದೆ.
ಚಾರ್ಲ್ಸ್‌ ಅವರ ತಾಯಿ, ಮಹಾರಾಣಿ ಎಲಿಜಬೆತ್ II ರ ಮರಣದ ಒಂದು ತಿಂಗಳ ನಂತರ ಪಟ್ಟಭಿಷೇಕ ಕಾರ್ಯಕ್ರಮವನ್ನು ಘೋಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!