VIRAL VIDEO| `ಕಿಂಗ್ ಫಿಶರ್’ ರಕ್ಷಿಸಿದ ಯುವಕ: ಸ್ವಚ್ಛಂದವಾಗಿ ಹಾರಾಡಿದ ಹಕ್ಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವರಿಗೆ ಹಕ್ಕಿಗಳೆಂದರೆ ತುಂಬಾ ಇಷ್ಟ. ಅವು ಪಕ್ಷಿಗಳಿಗೆ ಆಹಾರ ನೀಡುವುದು ಮಾತ್ರವಲ್ಲ, ಅಪಾಯದಲ್ಲಿದ್ದರೂ ಅವುಗಳನ್ನು ರಕ್ಷಿಸುತ್ತಾರೆ. ಇಂತಹ ಅನೇಕ ಘಟನೆಗಳು ವೈರಲ್‌ ಆಗಿವೆ. ಇದೀಗ ವ್ಯಕ್ತಿಯೊಬ್ಬ ಕಿಂಗ್ ಫಿಶರ್ ಪಕ್ಷಿಯನ್ನು ರಕ್ಷಿಸಿರುವ ವಿಡಿಯೋ ವೈರಲ್‌ ಆಗಿದೆ.

ಚಳಿಗಾಲವಾದ್ದರಿಂದ ಎಲ್ಲಿ ನೋಡಿದರೂ ಹಿಮ. ಕಿಂಗ್ ಫಿಶರ್ ಹಕ್ಕಿ ಬಂದು ನದಿ ಬಳಿಯ ಕಬ್ಬಿಣದ ಕಂಬಿ ಮೇಲೆ ಕುಳಿತಿದೆ. ತುಂಬಾ ಹೊತ್ತು ಇದ್ದುದರಿಂದ, ಅದರ ಕಾಲುಗಳು ಮಂಜುಗಡ್ಡೆಯೊಂದಿಗೆ ಕಂಬಿಗೆ ಅಂಟಿಕೊಂಡವು. ಅಲ್ಲಿಂದ ಹಾರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಒದ್ದಾಡಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಅಲ್ಲಿಗೆ ಹೋಗಿ ಪಕ್ಷಿ ಕಾಲಿಗೆ ಹಾನಿಯಾಗದಂತೆ ಬಿಡಿಸಿ ಸ್ವತಂತ್ರವಾಗಿ ಹಾರಲು ಬಿಟ್ಟಿದ್ದಾನೆ.

ಈ ಎಲ್ಲಾ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಪಕ್ಷಿಯನ್ನು ರಕ್ಷಿಸಿದ ವ್ಯಕ್ತಿಯ ಬಗ್ಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!