ಲೋಕಾಯುಕ್ತ ಬಲೆಗೆ ಬಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಜೂ. ಇಂಜಿನಿಯರ್

ಹೊಸದಿಗಂತ ವರದಿ ಮಂಗಳೂರು:

ಮುಲ್ಕಿಯ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿರುವ ವೇಳೆಯಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಹಾಗೂ ಜೂನಿಯರ್ ಇಂಜಿನಿಯರ್ ನಾಗರಾಜರವರನ್ನು ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ.

ದೂರುದಾರರು ಪಿಡಬ್ಲ್ಯೂಡಿ ಕ್ಲಾಸ್ 1 ಗುತ್ತಿಗೆದಾರರರಾಗಿದ್ದು, 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್ ಕೋಡಿ ಯಲ್ಲಿ ಸರಕಾರಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಕೆಲಸ ಮಾಡಿದ್ದರು. ಕಾಮಗಾರಿಯ ಹಣ 9,77, 154ರೂ ಮೊತ್ತದ ಬಿಲ್ಲು ಮಂಜೂರಾತಿಯ ಬಗ್ಗೆ ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಜೂನಿಯ‌ರ್ ಇಂಜಿನಿಯರ್ ನಾಗರಾಜು ರವರಲ್ಲಿ ವಿಚಾರಿಸಿದಾಗ ಬಿಲ್ ಪಾಸ್ ಮಾಡಲು ತನಗೆ ರೂ 37,000 ಲಂಚವನ್ನು ನೀಡುವಂತೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಎಂ.ಆರ್ ಸ್ವಾಮಿರವರಿಗೆ ರೂ 15,000- ಲಂಚವನ್ನು ನೀಡಬೇಕೆಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ನಡುವೆ ಜೂನಿಯರ್ ಇಂಜಿನಿಯರ್ ನಾಗರಾಜು ರವರು ಮುಂಗಡವಾಗಿ 7000 ರೂ ಹಣವನ್ನು ಗುತ್ತಿಗೆದಾರರಿಂದ ಪಡೆದುಕೊಂಡಿದ್ದರು ಎನ್ನಲಾಗಿದೆ.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಅವರು ಲಂಚ ಕೇಳಿದ ಬಗ್ಗೆ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಅದರಂತೆ ಲೋಕಾಯುಕ್ತ ಪೊಲೀಸರು ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ ದಾಳಿ ನಡೆಸಿದ್ದಾರೆ.

ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು ರವರು ಗುತ್ತಿಗೆದಾರರಿಂದ ರೂ. 30,000 ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ರವರು ರೂ 15,000 ಲಂಚದ ಹಣವನ್ನು ಸ್ವೀಕರಿಸುವಾಗಲೇ ಹಿಡಿದಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!