ಇನ್ಫೋಸಿಸ್​ನ ನಿರ್ದೇಶಕರ ಮಂಡಳಿಯಿಂದ ಕಿರಣ್ ಮಜುಮ್ದಾರ್ ನಿವೃತ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇನ್ಫೋಸಿಸ್​ನ ನಿರ್ದೇಶಕರ ಮಂಡಳಿಯಿಂದ (Infosys Board) ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ (Kiran Mazumdar Shah) ಅವರು ನಿವೃತ್ತರಾಗಿದ್ದಾರೆ.

ಬೆಂಗಳೂರು ಮೂಲದ ಇನ್ಫೋಸಿಸ್​ನ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾಗಿ (Lead Independent Director) ಕಿರಣ್ ಮಜುಮ್ದಾರ್ ಷಾ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅವರು ನಿವೃತ್ತರಾಗಿದ್ದಾರೆ.

ಇದೇ ವೇಳೆ, ಡಿ ಸುಂದರಮ್ ಅವರನ್ನು ಇನ್ಫೋಸಿಸ್​ನ ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿರುವ ವಿಚಾರವನ್ನೂ ಇನ್ಫೋಸಿಸ್ ಪ್ರಕಟಿಸಿದೆ. ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ (Nomination and Remuneration Committee) ಕೊಟ್ಟ ಶಿಫಾರಸಿನ ಆಧಾರದ ಮೇಲೆ ಸುಂದರಂ ಅವರನ್ನು ಆ ಸ್ಥಾನಕ್ಕೆ ಕೂರಿಸಲಾಗಿದೆ. ಸುಂದರಂ ಅವರು ಮಾರ್ಚ್ 23ರಿಂದಲೇ ಹೊಸ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ.

ಡಿ. ಸುಂದರಮ್ ಅವರು 2017ರಿಂದಲೂ ಇನ್ಫೋಸಿಸ್​ನ ನಿರ್ದೇಶಕರ ಮಂಡಳಿಯಲ್ಲಿ ಇದ್ದಾರೆ. ಇನ್ನು, ಕಿರಣ್ ಮಜುಮ್ದಾರ್ ಷಾ ಅವರು 2014ರಲ್ಲೇ ಇನ್ಫೋಸಿಸ್ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾಗಿದ್ದರು. 2018ರಲ್ಲಿ ಮುಖ್ಯ ಸ್ವತಂತ್ರ ನಿರ್ದೇಶಕಿಯಾಗಿ ಬಡ್ಡಿ ಪಡೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!