ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ನಿರಾಸೆಯ ಸಿನಿಮಾಗಳನ್ನು ನೀಡಿದ್ದ ಬಾಲಿವುಡ್ಗೆ ಜೀವ ತುಂಬಿದ್ದು ಶಾರುಖ್-ದೀಪಿಕಾ ಅಭಿನಯದ ಪಠಾಣ್.
ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಪಠಾಣ್ ನೋಡಿದ ಜನ ಬಾಲಿವುಡ್ ಟ್ರ್ಯಾಕ್ಗೆ ಬಂದಿದೆ, ಇನ್ನು ಉತ್ತಮ ಸಿನಿಮಾಗಳು ಸಿಗಲಿವೆ ಎಂದು ಆಶಿಸಿತ್ತು.
ಅಂತೆಯೇ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಹಾಗೂ ಬಹುತಾರಾಂಗಣದ ಸಿನಿಮಾ ಕಿಸಿ ಕ ಭಾಯ್ ಕಿಸಿ ಕಿ ಜಾನ್ ರಿಲೀಸ್ ಆಗಿದ್ದು, ಮೊದಲ ದಿನವೇ ಕೇವಲ 6.5 ರೇಟಿಂಗ್ ಪಡೆದಿದೆ.
ಐಎಂಡಿಬಿಯಲ್ಲಿ ರೇಟಿಂಗ್ ನೋಡಿಯೇ ಜನ ಸಿನಿಮಾ ನೋಡೋದಕ್ಕೆ ಆಯ್ಕೆ ಮಾಡಿಕೊಳ್ತಾರೆ. ಈ ರೇಟಿಂಗ್ 10 ಕ್ಕೆ 6.5 ಎಂದರೆ ತೀರಾ ಸಾಧಾರಣ ಸಿನಿಮಾ ಎನ್ನಬಹುದು. ಇನ್ನು ಬುಕ್ ಮೈ ಶೋ 7.1 ರೇಟಿಂಗ್ ನೀಡಿದೆ.
ರೇಟಿಂಗ್ ಕಡಿಮೆ ಇರುವ ಕಾರಣ ಸಾಕಷ್ಟು ಮಂದಿ ಸಿನಿಮಾ ನೋಡಲು ಆಸಕ್ತಿ ತೋರಿಸಿಲ್ಲ. ಇನ್ನು ಇದು ತಮಿಳಿನ ವೀರಂ ಸಿನಿಮಾ ರಿಮೇಕ್ ಆಗಿದ್ದು, ಅದನ್ನು ನೋಡಿದವರು ಹಳೆ ಕಥೆ ಎಂದು ಸಿನಿಮಾ ನೋಡೋದಕ್ಕೆ ಹೋಗಿಲ್ಲ.