spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಸೂಪರ್‌ ಟೇಸ್ಟಿ ಕಣ್ರಿ ಈ ಸೌತೆಕಾಯಿ ಬಿಳಿ ಸಾಂಬಾರ್:‌ ಹೇಗೆ ಮಾಡೋದು ನೋಡಿ…

ದಿನವೂ ಒಂದೇ ರೀತಿ ಸಾಂಬಾರ್‌ ಮಾಡಿ ಮಾಡಿ, ತಿಂದು ತಿಂದು ನಿಮಗೆ ಬೋರ್‌ ಆಗಿರುತ್ತದೆ. ಇನ್ಮುಂದೆ ವಾರದಲ್ಲಿ ಎರಡು ದಿನ ಈ ರೀತಿ ಸಾಂಬಾರ್‌ ಸೇವಿಸಿ..

ಬೇಕಾಗುವ ಸಾಮಗ್ರಿ:

ಸವತೆಕಾಯಿ- 2,
ಅರಿಶಿನ ಪುಡಿ-1/2 ಟೀ ಸ್ಪೂನ್,
ದಪ್ಪ ಮೊಸರು-1/4 ಕಪ್,
ಉಪ್ಪು ರುಚಿಗೆ ತಕ್ಕಷ್ಟು.
ತೆಂಗಿನಕಾಯಿ ತುರಿ ½ ಕಪ್ ,
ಜೀರಿಗೆ-1/2 ಟೀ ಸ್ಪೂನ್,
ಹಸಿಮೆಣಸು-1,
ಎಣ್ಣೆ-1.5 ಟೀ ಸ್ಪೂನ್,
ಕರಿಬೇವು-ಸ್ವಲ್ಪ

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಬಿಡಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಬಿಳಿ ಸೌತೆಕಾಯಿ ಹಾಕಿ ಹದವಾಗಿ ಬೇಯಿಸಿ
  • ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಜೀರಿಗೆ, ಹಸಿಮೆಣಸು ಹಾಕಿ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ .
  •  ಬೇಯಿಸಿಟ್ಟುಕೊಂಡ ತರಕಾರಿ, ರುಬ್ಬಿಕೊಂಡ ಮಸಾಲೆ, ಸ್ವಲ್ಪ ನೀರು ಹಾಕಿ 5 ನಿಮಿಷ ಬಿಸಿ ಮಾಡಿಕೊಳ್ಳಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  • ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ.
  • ಈ ಒಗ್ಗರಣೆಯನ್ನು ತರಕಾರಿ ಮಿಶ್ರಣಕ್ಕೆ ಹಾಕಿ.
  • ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ  ಸೌತೆಕಾಯಿ ಸಾಂಬಾರು ರೆಡಿ.
- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap