Saturday, June 25, 2022

Latest Posts

ಇಂಗ್ಲೆಂಡ್‌ನಲ್ಲಿ ಕೆ.ಎಲ್‌.ರಾಹುಲ್‌ ಜೊತೆ ಅಥಿಯಾ ಶೆಟ್ಟಿ ಫೋಟೋ: ಡೇಟಿಂಗ್ ವದಂತಿಗಳಿಗೆ ಸಿಕ್ಕಿತು ಮೊತ್ತೊಂದು ಸಾಕ್ಷಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ಮತ್ತೊಮ್ಮೆ ಡೇಟಿಂಗ್ ವದಂತಿಗಳಿಗೆ ಸಾಕ್ಷಿಯಾಗಿದೆ.
ನಿನ್ನೆ ಕ್ರಿಕೆಟಿಗ ಇಶಾಂತ್ ಶರ್ಮಾ ಅವರು ಪತ್ನಿ ಪ್ರತಿಮಾ ಸಿಂಗ್ ಜೊತೆ ರಾಹುಲ್‌, ಆಥಿಯಾ ಶೆಟ್ಟಿ ಕೂಡ ಇರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ನಲ್ಲಿ ರಾಹುಲ್ ಇದ್ದು, ಆಥಿಯಾ ಶೆಟ್ಟಿ ಕೂಡ ಅಲ್ಲಿಯೇ ಜೊತೆಗೆ ಇದ್ದಾರೆ ಎಂದು ಗೋಚರವಾಗುತ್ತಿದೆ.
ಈ ಹಿಂದೆಯೇ ರಾಹುಲ್ ಮತ್ತು ಅಥಿಯಾ ತಮ್ಮ ಪ್ರೀತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತೋರಿಸಿದ್ದಾರೆ. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ದೃಢಪಡಿಸಿಲ್ಲ.
ಇಂಗ್ಲೆಂಡ್‌ ಪ್ರವಾಸದಲ್ಲಿರುವ ಕೆ.ಎಲ್‌.ರಾಹುಲ್‌ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅಥಿಯಾ ಕೊನೆಯ ಬಾರಿಗೆ ಪರದೆ ಮೇಲೆ ಕಾಣಿಸಿಕೊಂಡಿದ್ದು 2019 ರಲ್ಲಿ. ಅದು ಕೂಡ ಮೋತಿಚೂರ್ ಚಕ್ನಾಚೂರ್ ಎಂಬ ಹಾಸ್ಯ-ನಾಟಕ ಸಿನಿಮಾದಲ್ಲಿ. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ನಟಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss