ಹೊಸದಿಗಂತ ವರದಿ ಗಂಗಾವತಿ:
17 ನೇ ದಿನದ ಗಣಪತಿ ವಿಸರ್ಜನೆ ವೇಳೆ ಗಲಾಟೆ ನಡೆದು ಯುವಕನಿಗೆ ಚಾಕು ಇರಿದು, ಮೂವರ ಮೇಲೆ ಹಲ್ಲೆ ಮಾಡಿದ ಘಟನೆ ಗಂಗಾವತಿ ನಗರದ ಯಶೋದಾ ಆಸ್ಪತ್ರೆ ಎದುರು ಸೋಮವಾರ ತಡರಾತ್ರಿ ನಡೆದಿದೆ.
ಡಾನ್ಸ್ ಮಾಡುತ್ತಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಯುವಕನೊಬ್ಬನಿಗೆ ಚಾಕು ಇರಿದಿದ್ದಾರೆ. ಘಟನೆಯಲ್ಲಿ ಶಿವು (38) ಎಂಬಾತನಿಗೆ ಚಾಕು ಇರಿದಿದ್ದಾರೆ. ಗಣೇಶ, ಮಂಜು,ಸಾಗರ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ.