Tuesday, June 28, 2022

Latest Posts

ಸಿಡಿಲು ಬಡಿದು ಮೂವರ ದಾರುಣ ಸಾವು

ಹೊಸ ದಿಗಂತ ವರದಿ, ವಿಜಯಪುರ:

ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಟಕ್ಕೆ ಹತ್ತಿರ ಮೊಹಮ್ಮದ್ ಮಸೀದಿ ಬಳಿ ಬುಧವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಅಶೋಕ ರಾಮು ಕಾರಜೋಳ (48), ಭಾಶಾಸಾಹೇಬ ಕರ್ಜಗಿ (40), ಜಾವೀದ್ ಹದೀಲ್ ಜಾಲಗೇರಿ (33) ಎಂದು ಗುರುತಿಸಲಾಗಿದೆ.
ಇವರು ಹೊಲದಿಂದ ಬರುತ್ತಿದ್ದಾಗ, ಗುಡುಗು, ಮಿಂಚು ಮಿಶ್ರಿತ ಮಳೆ ಬಂದಿದೆ. ಆ ವೇಳೆ ಮಸೀದಿಯ ಪಕ್ಕದಲ್ಲಿ ನಿಂತುಕೊಂಡಾಗ ಸಿಡಿಲು ಬಡಿದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss