ಮೇಘನಾ ಶೆಟ್ಟಿ, ಶಿವಮೊಗ್ಗ
ಜಗತ್ತಿನಲ್ಲಿ ಇರೋ ಕೌತುಗಳಿಗೆ ಲೆಕ್ಕವೇ ಇಲ್ಲ. ಇದೆಂಥಾ ವಿಚಿತ್ರಾ ಎಂದು ಬೆರಳ ಮೇಲೆ ಬಾಯಿಡುವಂತೆ ಮಾಡುತ್ತವೆ. ಅಷ್ಟೇ ಅಲ್ಲ, ಹೀಗಾಗೋಕೆ ಹೇಗೆ ಸಾಧ್ಯ ಅನ್ನೋ ರೀತಿ ಆಲೋಚನೆಯಲ್ಲಿ ನಮ್ಮನ್ನು ಮುಳುಗಿಸಿಬಿಡುತ್ತವೆ. ಇಂಥದ್ದೇ ಒಂದು ಕೌತುಕದ ಬಗ್ಗೆ ಇಂದು ತಿಳಿಯೋಣ.
ಇಂಗ್ಲೆಂಡ್ನಲ್ಲೊಂದು ಬಾವಿ ಇದೆ. ಈ ಬಾವಿಯೊಳಗೆ ನೀವು ಏನನ್ನೇ ಹಾಕಿದ್ರೂ ಅದು ಕಲ್ಲಾಗಿ ಹೋಗತ್ತೆ. ಹೌದು, ಗೊಂಬೆಗಳು, ಶೂ, ಸೈಕಲ್, ಚಪ್ಪಲಿ ಹೀಎ ಯಾವ ವಸ್ತು ಬೇಕಿದ್ರೂ ಹಾಕಿ. ಅದನ್ನು ವಾಪಾಸ್ ತೆಗೆದಾಗ ಅದು ಕಲ್ಲಾಗುತ್ತದೆ.
ಕೆನರ್ಸ್ಬರ್ಗ್ನ ಉತ್ತರ ಯಾರ್ಕ್ ಶೈರ್ ಪ್ರದೇಶದಲ್ಲಿ ಈ ಬಾವಿ ಇದೆ. ಯಾವುದೋ ಶಾಪದಿಂದ ಹೀಗೆಲ್ಲಾ ಆಗ್ತಿದೆ ಎಂದು ಇಲ್ಲಿನ ಜನ ನಂಬುತ್ತಾರೆ.
ಕ್ಯೂರಿಯಾಸಿಟಿ ಹೆಚ್ಚು
ಯಾರಿಗೇ ಆಗಲಿ ಈ ರೀತಿ ಬಾವಿ ಬಗ್ಗೆ ಕೇಳಿದಾಗ ತಮ್ಮದೊಂದು ವಸ್ತು ಹಾಕಿ ಪರೀಕ್ಷಿಸೋಣ ಅಂತ ಅನಿಸುತ್ತದೆ. ಅದೇ ರೀತಿ ತಮ್ಮಿಷ್ಟದ ವಸ್ತುಗಳಿಗೆ ದೊಡ್ಡ ಹಗ್ಗವನ್ನು ಕಟ್ಟಿ ಬಾವಿಯೊಳಗೆ ಇಳಿ ಬಿಟ್ಟಿದ್ದಾರೆ. ಇದಾದ ಆರು ತಿಂಗಳಲ್ಲಿ ಅದೇ ವಸ್ತು ಕಲ್ಲಾಗಿರುತ್ತದೆ.
ಮೂಡನಂಬಿಕೆ ಸುತ್ತ
ಈ ಬಾವಿಯ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಬೇರೆ ಬೇರೆ ರೀತಿ ನಂಬಿಕೆ ಇದೆ. ಕೆಲವರು ಈ ಬಾವಿಯಲ್ಲಿ ನಕಾರಾತ್ಮಕ ಶಕ್ತಿ ಇದ್ದು, ಅದೇ ಇದಕ್ಕೆಲ್ಲಾ ಕಾರಣ ಎಂದು ನಂಬುತ್ತಾರೆ. ಇನ್ನೂ ಹಲವರು ಬಾವಿ ನೋಡೋದಕ್ಕೆ ತಲೆಬುರುಡೆಯಂತೆ ಕಾಣುತ್ತಿದ್ದು, ರಾಕ್ಷಸನ ಬಾಯಿ ಇದು ಬಾವಿಯಲ್ಲ ಅಂತಾರೆ.
ಹತ್ರ ಹೋಗೋದಿಲ್ಲ
ಮನುಷ್ಯನ ಕ್ಯೂರಿಯಾಸಿಟಿ ಎಷ್ಟೇ ಇರಬಹುದು. ಆದರೆ ಜೀವ ಪಣಕ್ಕಿಡೋ ಅಷ್ಟೊಂದು ಖಂಡಿತಾ ಅಲ್ಲ. ವಸ್ತುಗಳನ್ನು ಎಸೆಯುವಾಗ ಅಪ್ಪಿ ತಪ್ಪಿ ಬಿದ್ದರೆ ನಾವೂ ಕಲ್ಲಾಗುತ್ತೀವಿ ಎನ್ನುವ ಭಯ ಇವರಿಗಿದೆ. ಹಾಗಾಗಿ ಈ ಬಾವಿ ಬಳಿ ಯಾರೂ ಹೋಗೋದಿಲ್ಲ.
ಔಷಧೀಯ ಗುಣ
ಈ ಬಾವಿ ಬಗ್ಗೆ ಎಷ್ಟೇ ನಕಾರಾತ್ಮಕ ಸುದ್ದಿಗಳಿದ್ದರೂ ಕೆಲವು ವರ್ಗದ ಜನ ಈ ಬಾವಿ ನೀರು ಸಂಜೀವಿನಿ ಎಂದು ನಂಬುತ್ತಾರೆ. ಈ ಬಾವಿ ನೀರನ್ನು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ. ರೋಗ ನಿವಾರಣೆ ಆಗುತ್ತದೆ ಎನ್ನುತ್ತಾರೆ.
ಸೈನ್ಸ್ ಏನ್ ಹೇಳತ್ತೆ?
ಇಷ್ಟೆಲ್ಲಾ ಈ ಬಾವಿ ಫೇಮಸ್ ಆದ ನಂತರ ಇಲ್ಲಿಗೆ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ಈ ನೀರಿನಲ್ಲಿ ಅತೀ ಹೆಚ್ಚು ಮಿನರಲ್ಸ್ ಇದೆ. ಇದರಿಂದಾಗ ವಸ್ತುಗಳು ಕಲ್ಲಿನಂತೆ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಈ ಪ್ರದೇಶ ಪ್ರವಾಸಿ ತಾಣವಾಗಿದೆ. ಬ್ಯಾರಿಕೇಡ್ ಹಾಕಿ ಜನರಿಗೆ ಕಲ್ಲಾಗಿರುವ ವಸ್ತುಗಳನ್ನು ನೋಡಲು ಅವಕಾಶ ನೀಡಲಾಗಿದೆ.