ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೋಡಿ ಬೆಳ್ತಂಗಡಿಯಿಂದ ಬಂಗಾಳಕ್ಕೆ ಸೆಳೆದಿದೆ ‘ಮೋದಿ’ ಮೇಲಿನ ಪ್ರೇಮ!!

ದೀಪಕ ಆಠವಳೆ, ಸೂಳಬೆಟ್ಟು

ಹೊಸದಿಗಂತ ವರದಿ, ಬೆಳ್ತಂಗಡಿ:

ಪ್ರಧಾನಿ ಮೋದಿಯ ಮೋಡಿ ಬೆಳ್ತಂಗಡಿ ತಾಲೂಕಿನಲ್ಲಿನ ಬೆಂಗಾಲಿಯರನ್ನೂ ಬಿಟ್ಟಿಲ್ಲ. ಯಾಕೆಂದರೆ ತಾಲೂಕಿನಲ್ಲಿರುವ ಸಾವಿರಾರು ಬೆಂಗಾಲಿಗಳು ತಮ್ಮ ರಾಜ್ಯದಲ್ಲಿನ ಚುನಾವಣೆಯಲ್ಲಿ ಮತದಾನಗೋಸ್ಕರ ಅದೂ ಬಿಜೆಪಿಗೆ ಮತದಾನ ಮಾಡಲು ತೆರಳಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಯಾಕೆ ಇಷ್ಟವಾಗಿ ದ್ದಾರೆ ಎನ್ನುವುದಕ್ಕೆ ಕಾರಣ ಹೀಗಿದೆ ಓದಿ..

ಇಲ್ಲಿದ್ದಾರೆ 3 ಸಾವಿರಕ್ಕೂ ಅಧಿಕ ಮಂದಿ:
ತಾಲೂಕಿನಾದ್ಯಂತ ವಿವಿಧ ಎಸ್ಟೇಟ್ ಮತ್ತು ತೋಟಗಳಲ್ಲಿ ಕಾರ್ಮಿಕರು ಇರುವುದು ಹೆಚ್ಚಾಗಿ ಬಂಗಾಲಿಯರೆ. ಒಂದು ಅಂದಾಜಿನ ಪ್ರಕಾರ ಸುಮಾರು 3000 ಕ್ಕೂ ಮಿಕ್ಕಿ ಬೆಂಗಾಲಿಗಳು ತಾಲೂಕಿನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.

ರೈಲಿನಲ್ಲಿ ಹಣ ದೋಚುತ್ತಿದ್ದರು:
2014ರ ಮೊದಲು ಉತ್ತರ ಭಾರತದ ಕಾರ್ಮಿಕರು ಇಲ್ಲಿಂದ ತಮ್ಮ ಊರಿಗೆ ರೈಲಿನಲ್ಲಿ ಹೋಗುತ್ತಿದ್ದರು. ಎಲ್ಲರೂ ಒಟ್ಟಾಗಿ ಹೋಗುವುದು ಅವರ ಪದ್ಧತಿ. ತಾವು ವರ್ಷ ಪೂರ್ತಿ ದುಡಿದು ಸಂಪಾದಿಸಿದ ಹಣವನ್ನೂ ಇದೇ ಸಂದರ್ಭ ಜೊತೆಗೊಯ್ಯತ್ತಿದ್ದರು. ಆದರೆ ಅದು ಅವರ ಮನೆಗೆ ತಲುಪುತ್ತಿರಲಿಲ್ಲ. ಇವರೆಲ್ಲರೂ ಆಗಮಿಸುತ್ತಿರುವ ಮಾಹಿತಿ ಹೇಗೋ ತಿಳಿದ ಗೂಂಡಾಗಳು ಇವರು ರೈಲಿನಿಂದ ಇಳಿದ ತಕ್ಷಣ ದೋಚುತ್ತಿದ್ದರು. ಇದರಿಂದ ಖಾಲಿ ಕೈಯಲ್ಲಿ ದುಃಖತಪ್ತರಾಗಿ ಮನೆಗೆ ತೆರಳಬೇಕಾಗುತ್ತಿತ್ತು.  ಇದಕ್ಕು ಪಾಯವಾಗಿ ಅವರು ರೈಲು ಬಿಟ್ಟು ವಿಮಾನ ಹತ್ತಲು ಪ್ರಾರಂಭಿಸಿದರು. ಆದರೆ ಅದು ಅವರಿಗೆ ದುಬಾರಿಯೆನಿಸುತ್ತಿತ್ತು. ಬಿಹಾರದ ಕಾರ್ಮಿಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಮೋದಿ ಬಂದ್ರು ಪಟ್ಟಕ್ಕೆ:
ಯಾವಾಗ ನರೇಂದ್ರ ಮೋದಿ ಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೋ ಅಂದಿನಿಂದ ಉತ್ತರ ಭಾರತದ ಕೂಲಿ ಕಾರ್ಮಿಕರ ಸ್ಥಿತಿಯೇ ಬದಲಾಗಿ ಹೋಯಿತು. ಯಾಕೆಂದರೆ ಮೋದಿಯವರು ಪ್ರಾರಂಭಿಸಿದ ಜನಧನ್‌ಯೋಜನೆ ಹಾಗು ಡಿಜಿಟಲ್ ಪಾವತಿಯಂತಹ ಉಪಕ್ರಮಗಳು ಈ ಕಾರ್ಮಿಕರಿಗೆ ವರವಾಗಿ ಪರಿಣಮಿಸಿತು. ಈಗ ಮಾಲಕರು ಕಾರ್ಮಿಕರ ಖಾತೆಗೆ ನೇರವಾಗಿ ಹಣ ವರ್ಗಾಯಿಸುತ್ತಿದ್ದು, ಅದನ್ನು ಕಾರ್ಮಿಕರು ನೇರವಾಗಿ ತಮ್ಮ ಮನೆಯವರ ಖಾತೆಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಬಂಗಾಲಿ ಹಾಗೂ ಇತರ ರಾಜ್ಯದ ಕಾರ್ಮಿಕರಿಗೆ ಮೋದಿ ಇಷ್ಟವಾಗಿದ್ದಾರೆ.

ಇಲ್ಲಿತ್ತು ಹಫ್ತಾ ವಸೂಲಿಗಳ ಕಿರಿಕ್:
ಶನಿವಾರ ಬಂತೆಂದರೆ ಇವರನ್ನು ಕೆಲಸಕ್ಕೆ ನೇಮಿಸಿದ ಏಜೆಂಟ್ ಅಥವಾ ಕಟ್ಟಡದ ಸೆಕ್ಯುರಿಟ್ ಗಾರ್ಡ್ ಹಫ್ತಾ ವಸೂಲಿಗಾರರಿಗೆ ಸಂಬಳ ಸಿಕ್ಕಿರುವ ಮಾಹಿತಿ ನೀಡುತ್ತಿದ್ದ. ಅವರು ತಕ್ಷಣವೇ ಬಂದು ಬಲಾತ್ಕಾರವಾಗಿ ಹಣ ವಸೂಲಿ ಮಾಡುತ್ತಿದ್ದರು. ಆದರೆ ಡಿಜಿಟಲ್ ಪಾವತಿಯಿಂದಾಗಿ ಅದು ನಿಂತು ಹೋಗಿ ದುಡಿದ ಹಣ ತಮಗೆ ಮತ್ತು ತಮ್ಮ ಬಂಧುಬಾಂಧವರಿಗೆ ನೇರವಾಗಿ ತಲಪುತ್ತಿದೆ ಎಂದು ಉಜಿರೆಯಲ್ಲಿರುವ ಮುರ್ಶಿದಾಬಾದ್‌ನ ಸುಘೋಷ್ ಮುರ್ವೋ ಸಂತಸ ವ್ಯಕ್ತಪಡಿಸುತ್ತಾರೆ.  ಜನಧನ್, ಡಿಜಿಟಲ್  ವ್ಯವಸ್ಥೆಯಿಂದಾಗಿ ಯಾವುದೇ ಮಧ್ಯವರ್ತಿಗಳ, ಹಫ್ತಾ ವಸೂಲಿಗಾರರ ಕಿರುಕುಳ ಇಲ್ಲ. ಮಿನ್ಸಾರ್, ಸಿಜೆಮ್, ದೇಬನ್ ಹೀಗೆ ತಾಲೂಕಿನಲ್ಲಿರುವ ಪ.ಬಂಗಾಲದ ಸಾವಿರಾರು ಕಾರ್ಮಿಕರು, ಯಾವಾಗ ಚುನಾವಣಾ ದಿನಾಂಕ ಪ್ರಕಟವಾಯಿತೋ ಅಂದೇ ರೈಲಿನ ಟಿಕೇಟು ಕಾದಿರಿಸಿ ಇದೀಗ ಬಂಗಾಲಕ್ಕೆ ಮತದಾನ ಮಾಡುವುದಕ್ಕೆಂದೇ ತೆರಳಿದ್ದಾರೆ.

ಇದು ಮೋದಿ ಅವರ ಕೊಡುಗೆ:
ನಮಗೆ ದ.ಕ., ಉಡುಪಿಯಲ್ಲಿ ಸಿಗುವಷ್ಟು ಆದರ, ಮರ್ಯಾದೆ, ಸತ್ಕಾರ ಇನ್ನಿತರ ಯಾವುದೇ ಪ್ರದೇಶದಲ್ಲಿ ಸಿಗುತ್ತಿಲ್ಲ. ಇಲ್ಲಿ ದುಡಿಮೆಯೂ ಇದೆ. ಅದಕ್ಕೆ ತಕ್ಕಂತೆ ವೇತನವೂ ಸಿಗುತ್ತದೆ. ಯಾವ ಹಫ್ತಾವೂ ನೀಡಬೇಕಾಗಿಲ್ಲ. ನೆಮ್ಮದಿಯಾಗಿದ್ದೇವೆ. ಜನಧನ ಖಾತೆಯ ಪರಿಣಾಮ ದೂರದಲ್ಲಿರುವ ನಮ್ಮ ತಂದೆ-ತಾಯಿ, ಸಹೋದರಿಯರೂ ನೆಮ್ಮದಿಯಾಗಿದ್ದಾರೆ. ಇದು ಮೋದಿಯವರ ಕೊಡುಗೆ ಎನ್ನುತ್ತಾರೆ ಕಾರ್ಮಿಕರಾದ ಮಶೋಡಾ ಪಾಶಾ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss